ಸರ್ವ ಧರ್ಮ, ಸರ್ವ ಜಾತಿ ಒಪ್ಪುವ ಗುರು ಶ್ರೀ ನಾರಾಯಣಗುರು: ಕೆ. ಕೃಷ್ಣಮೂರ್ತಿ ಆಚಾರ್ಯ
ಉಡುಪಿ: ಜಿಲ್ಲಾ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಯಾವರದ ಕೋಟಿ ಚೆನ್ನಯ ಕಾಂಪ್ಲೆಕ್ಸ್ನ ಕಚೇರಿಯಲ್ಲಿ ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ನೆರವೇರಿಸಿದರು.
ಶ್ರೀನಾರಾಯಣ ಗುರುಗಳು ಇಡೀ ವಿಶ್ವದ ಸರ್ವ ಜಾತಿಯ ಜನರು ಒಪ್ಪಿಕೊಳ್ಳುವ ಗುರು ಮತ್ತು ಒಂದೇ ಜಾತಿ ,ಒಂದೇ ಧರ್ಮ ಒಂದೇ ದೇವರು ಎಂಬುದು ಇಂದಿನ ಪ್ರಸ್ತುತ ವಿಚಾರ ಎಂದು ಹೇಳಿದರು.
ಶ್ರೀ ನಾರಾಯಣ ಗುರುಗಳ ಜಯಂತಿ ದಿನದಂದು ಯುವ ವೇದಿಕೆಯವರು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಮುಸ್ಲಿಂ, ಕ್ರೈಸ್ತ, ಹಿಂದೂ ಮಾತ್ರ ಅಲ್ಲದೆ ಹಿಂದೂ ಧರ್ಮದ ಅನೇಕ ಜಾತಿಯ ವ್ಯಕ್ತಿಗಳು ಪಾಲ್ಗೊಂಡು ಆಚರಣೆ ಮಾಡಿದ್ದು ನಾರಾಯಣ ಗುರುಗಳ ತತ್ವಕ್ಕೆ ಗೌರವ ನೀಡಿದಂತಾಗಿದೆ ಎಂದರು. ಸಮಾಜದಲ್ಲಿ ಇಂತಹ ಕಾರ್ಯಕ್ರಮ ಇನ್ನಷ್ಟು ಮೂಡಿಬರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀನಾರಾಯಣ ಗುರುಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷರಾದ ಮಿಥುನ್ ಅಮೀನ್ ಕುತ್ಪಾಡಿ, ಪ್ರಕಾಶ್ ಪೂಜಾರಿ, ಜೆ.ಆರ್ ಮೆಡಿಕಲ್ ನ ಮಾಲಕರಾದ ವೇಣುಗೋಪಾಲ, ಸೌಹಾರ್ದ ಸಮಿತಿ ಅಧ್ಯಕ್ಷರಾದ ರಾಯ್ಸ್ ಫೆರ್ನಾಂಡಿಸ್, ಪಂಚಾಯತ್ ಸದಸ್ಯರಾದ ರಿಯಾಝ್ ಪಳ್ಳಿ, ಲಕ್ಷಣ ಸನಿಲ್, ಸಚಿನ್ ಬೊಳ್ಜೆ, ಸತೀಶ್ ಬೀರಪ್ಪಡಿ, ಗಿರೀಶ್ ಕುಮಾರ್ ಉದ್ಯಾವರ, ಸಾಯಿರಾಜ್ ಕಿದಿಯೂರ್, ಹರೀಶ್ ಪೂಜಾರಿ ಏಣಗುಡ್ಡೆ, ನವೀನ್ ಪೂಜಾರಿ, ಮೋಹನ್ ಸೋನ್ಸ್ , ಸಂದೇಶ ಪೂಜಾರಿ, ಉದಯ್ ಪೂಜಾರಿ, ಸುಪ್ರೀತ್ ಸುವರ್ಣ, ಕಿಶೋರ್ ಕುಮಾರ್, ಸುನಿಲ್ ಪೂಜಾರಿ ಮಲ್ಪೆ, ಮಾಧವ್ ಕಟ್ಟೆಗುಡ್ಡೆ, ರಾಘು ಸನಿಲ್, ಪ್ರಕಾಶ್ ಬಂಗೇರ, ದೇವು ಪೂಜಾರಿ ಉಪಸ್ಥಿತರಿದ್ದರು.
ನಾರಾಯಣ ಗುರು ಜಯಂತಿ ಪ್ರಯುಕ್ತ ಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.