ಕುಂದಾಪುರ: ಮೆಹಂದಿ ಕಾರ್ಯಕ್ರಮದ ದಿನವೇ ಮದುಮಗ ನಾಪತ್ತೆ!

ಕುಂದಾಪುರ: ಮದುವೆ ಹಿಂದಿನ ದಿನದ ನಡೆಯ ಬೇಕಿದ್ದ ಮೆಹಂದಿ ಕಾರ್ಯಕ್ರಮದಂದು ಮದುಮಗ ನಾಪತ್ತೆಯಾದ ಘಟನೆ ನಡೆದಿದೆ.

ಆ.19ರ ಸೋಮವಾರ ತಾಳಿ ಕಟ್ಟಲು ಸಿದ್ದವಾಗ ಬೇಕಾಗಿದ್ದ ವರ ಮುಂಚಿನ ದಿನ ಇದ್ದಕ್ಕಿದಂತೆ ನಾಪತ್ತೆಯಾಗಿದ್ದು ಈಗ ಕುಂದಾಪುರದಾದ್ಯಂತ ಚರ್ಚಾ ವಿಷವಾಗಿದೆ.

ಹುಡುಗ ಖಾಸಗಿ ಸಂಸ್ಥೆಯಲ್ಲಿ ವೃತ್ತಿಯಲ್ಲಿದ್ದ. ಈ ಹಿಂದೆ ಎರಡು ಕಡೆಯ ಮನೆಯವರು ಸೇರಿ ಮದುವೆ ನಿಶ್ಚಯಿಸಿದ್ದರು. ಅಳಿವೆಕೋಡಿ ಗ್ರಾಮದ ವರನೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ಸೋಮವಾರ ನಾಗೂರಿನಲ್ಲಿ ನಡೆಬೇಕಾಗಿತ್ತು.

ಆ.18 ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿತ್ತು. ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಚಿನ್ನಾಭರಣಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಇದೆ ಎಂದು ಮನೆಯವರಲ್ಲಿ ಹೇಳಿ, ಮೊಬೈಲ್‌, ಕೈಯಲ್ಲಿದ್ದ ಚಿನ್ನದ ಬ್ರಾಸ್‌ಲೇಟ್‌ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಮೆಹಂದಿಯ ಸಂಭ್ರಮದಲ್ಲಿ ಇದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಬಳಿಕ ಹುಡುಗ ನಾಪತ್ತೆ ವಿಷಯ ತಿಳಿದು ಬಂದ ಅತಿಥಿಗಳೆಲ್ಲಾರೂ ವಾಪಸು ತೆರಳಿದ್ದಾರೆ.

    Leave a Reply

    Your email address will not be published. Required fields are marked *

    error: Content is protected !!