ಆಗಸ್ಟ್ 23 ರಂದು “ಅನರ್ಕಲಿ” ತುಳು ಸಿನಿಮಾ ತೆರೆಗೆ

ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೊಮೇಶ್ವರ ನಿರ್ದೇಶನದಲ್ಲಿ ತಯಾರಾದ “ಅನರ್ ಕಲಿ” ತುಳು ಸಿನಿಮಾದ ಪತ್ರಿಕಾಗೋಷ್ಠಿ ಸೋಮವಾರ ಸಂಜೆ ನಗರದಲ್ಲಿ ನಡೆಯಿತು.

ಮಾಧ್ಯಮವನ್ನುದ್ದೇಶಿಸಿ ಮಾತಾಡಿದ ಲ. ಕಿಶೋರ್ ಡಿ ಶೆಟ್ಟಿ ಅವರು, “ಅನರ್ಕಲಿ ಸಿನಿಮಾ ಈಗಾಗಲೇ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ನಮ್ಮ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿನಿಮಾ ಕುರಿತು ತುಳುನಾಡಿನಲ್ಲಿ ಒಳ್ಳೆಯ ಮಾತು ಕೇಳಿಬರುತ್ತಿದೆ. ಇದು ನಮ್ಮ ಚಿತ್ರತಂಡಕ್ಕೆ ಖುಷಿ ತಂದಿದೆ. ನಾಡಿದ್ದು ಆಗಸ್ಟ್ 23ರಂದು ಸಿನಿಮಾ ಬಿಡುಗಡೆಯಾಗಲಿದ್ದು ತುಳುವರು ಸಿನಿಮಾ ನೋಡಿ ನಮ್ಮನ್ನು ಗೆಲ್ಲಿಸಬೇಕು” ಎಂದರು.

ನಟ ಶೋಭರಾಜ್ ಪಾವೂರು ಮಾತನಾಡಿ, “ಇದೊಂದು ಪರಿಶುದ್ಧವಾದ ತುಳು ಸಿನಿಮಾ. ಈ ಸಿನಿಮಾ ಹಿಂದೆ ಬಂದಿಲ್ಲ ಹಾಗಿದೆ ಹೀಗಿದೆ ಎಂದು ಸುಮ್ಮನೆ ಹೇಳುವುದಿಲ್ಲ. ಆದರೆ ಈ ಸಿನಿಮಾ ನೋಡಿದ ಬಳಿಕ ಎರಡು ದಿನಗಳಾದರೂ ನಿಮ್ಮನ್ನು ಕಾಡುತ್ತದೆ. ನಿಮ್ಮ ಹಣಕ್ಕೆ ಖಂಡಿತಾ ಲಾಸ್ ಆಗುವುದಿಲ್ಲ“ ಎಂದರು. ನಟಿ ಆರ್ ಜೆ ಮಧುರಾ ಮಾತನಾಡಿ, ”ಸಿನಿಮಾ ನೋಡಿದವರು ತುಂಬಾ ಚೆನ್ನಾಗಿದೆ ಎಂದು ಬೆನ್ನುತಟ್ಟಿದ್ದಾರೆ. ತುಳುವರು ಥಿಯೇಟರ್ ಗೆ ಬಂದು ಸಿನಿಮಾ ನೋಡಿದಲ್ಲಿ ನಾವು ಇನ್ನಷ್ಟು ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಲು ಸಾಧ್ಯ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು“ ಎಂದರು.

ನಿರ್ದೇಶಕ ಹರ್ಷಿತ್ ಸೋಮೇಶ್ವರ ಮಾತನಾಡಿ, ”ನೀವು ತಲೆ ಖಾಲಿ ಇಟ್ಟುಕೊಂಡು ಸಿನಿಮಾ ನೋಡಲು ಬನ್ನಿ. ಯಾಕೆಂದರೆ ಈ ಸಿನಿಮಾದಲ್ಲಿ 2 ಗಂಟೆ 10 ನಿಮಿಷಗಳ ಕಾಲ ನಿಮ್ಮನ್ನು ರಂಜಿಸಲು ಏನೆಲ್ಲಾ ಬೇಕೋ ಅದೆಲ್ಲವನ್ನು ತೋರಿಸಿದ್ದೇವೆ. ಹೀಗಾಗಿ ತುಳು ಭಾಷೆ ತುಳು ಸಿನಿಮಾವನ್ನು ಉಳಿಸಲು ಎಲ್ಲರೂ ಒಂದಾಗಿ ನಮ್ಮ ಸಿನಿಮಾ ನೋಡಿ ಬೆಂಬಲಿಸಿ“ ಎಂದು ಹೇಳಿದರು.ವೇದಿಕೆಯಲ್ಲಿ ಅರುಣ್ ರೈ ಪುತ್ತೂರು, ವಾತ್ಸಲ್ಯ, ಲಂಚುಲಾಲ್, ರಜನೀಶ್ ಕೋಟ್ಯಾನ್, ರೋಹಿತ್, ಮೋಹನ್ ಕೊಪ್ಪಲ ಮತ್ತಿತರರು ಉಪಸ್ಥಿತರಿದ್ದರು.

“ಅನರ್ ಕಲಿ” ಸಿನಿಮಾ ಒಂದೇ ಹಂತದಲ್ಲಿ 18 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರ್ ಮಾರ್ಗ, ಹಾಗೂ ಕಳಸದಲ್ಲಿ ಸಿನಿಮಾಕ್ಕೆ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಸಿನಿಮಾದಲ್ಲಿ ಒಂದು ಕಥಾಹಂದರವನ್ನು ಇಟ್ಟುಕೊಂಡು ಸಂಪೂರ್ಣ ಹಾಸ್ಯಭರಿತವಾಗಿ ಸಿನಿಮಾ ಸಾಗಿದೆ.ನವೀನ್ ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಸುಜಾತ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕ ನಟನಾಗಿ ವಿಜಯ್ ಶೋಭರಾಜ್ ಪಾವೂರು, ನಾಯಕಿಯಾಗಿ ಮಧುರ ಆರ್ ಜೆ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮೋಹನ್ ಕೊಪ್ಪಲ, ಹರ್ಷಿತ್ ಸೋಮೇಶ್ವರ, ಮಂಜು ರೈ ಮುಳೂರು, ರಂಜನ್ ಬೋಳೂರು ಶರಣ್ ಕೈಕಂಬ, ಪ್ರಕಾಶ್ ಶೆಟ್ಟಿ ಧರ್ಮನಗರ, ಮಧುರ ಆರ್.ಜೆ ವಾತ್ಸಲ್ಯ ಸಾಲಿಯಾನ್ , ವಿನಾಯಕ್ ಜೆಪ್ಪು ತಾರಾಗಣದಲ್ಲಿದ್ದಾರೆ.

ಛಾಯಾಗ್ರಹಣ ಅನಿಲ್ ಕುಮಾರ್, ಅರುಣ್ ರೈ ಪುತ್ತೂರು, ಸಹಾಯಕ ಛಾಯಾಗ್ರಹಣ ಚರಣ್ ಆಚಾರ್ಯ, ಪ್ರಜ್ವಲ್ ಸುವರ್ಣ, ಸಂಗೀತ ರೋಹಿತ್ ಪೂಜಾರಿ, ಕಾರ್ಯಕಾರಿ ನಿರ್ಮಾಪಕರು ಮಹೇಶ್ ಪುತ್ತೂರು, ವೀರ ಕೇಸರಿ, ನಿರ್ಮಾಣ ನಿರ್ವಹಣೆ ವಾತ್ಸಲ್ಯ ಸಾಲಿಯಾನ್, ವರ್ಣಾಲಂಕಾರ ಚೇತನ್ ಕಲ್ಲಡ್ಕ, ಸಹಾಯಕ ವರ್ಣಾಲಂಕಾರ ಸವ್ಯರಾಜ್ ಕಲ್ಲಡ್ಕ, ಚರಣ್ ರಾಜ್ ಪಚ್ಚಿನಡ್ಕ, ಕಲಾ ನಿರ್ದೇಶನ ಭರತ್ ತುಳುವ, ಸಹ ನಿರ್ದೇಶಕ ವೀರಕೇಸರಿ, ಭರತ್ ತುಳುವ, ವಿವೇಕ್ ಶೆಟ್ಟಿ, ಸಹಾಯಕ ನಿರ್ದೇಶಕರು ಸುದೇಶ್ ಪೂಜಾರಿ, ಮೋಕ್ಷಿತ್ ಕನಕಮಜಲು ಪವಿತ್ರಪ್ರಭು, ಅಮಿತ್, ಕೀರ್ತನ್ ರೈ ಸುಳ್ಯ, ವಸ್ತ್ರ ವಿನ್ಯಾಸ ಸವಿತ ಶೇಖರ್ ವಿದ್ಯಾ ಉಚ್ಚಿಲ್, ನೃತ್ಯ ನಿರ್ದೇಶನ ಶಶಾಂಕ್ ಸುವರ್ಣ, ಸಾಹಿತ್ಯ ಸುದೇಶ್ ಪೂಜಾರಿ, ಹರ್ಷಿತ್ ಸೋಮೇಶ್ವರ, ಹಿನ್ನಲೆ ಗಾಯನ ನಕುಲ್ ಅಭಯಂಕರ್, ಅರ್ಫಾಜ್ ಉಳ್ಳಾಲ್, ಸತೀಶ್ ಪಟ್ಲ, ಸೃಜನ್ ಕುಮಾರ್ ತೋನ್ಸೆ, ರೋಹಿತ್ ಪೂಜಾರಿ, ವಾತ್ಸಲ್ಯ ಸಾಲಿಯಾನದ, ಸೌಜನ್ಯ. ಪ್ರಚಾರ ವಿನ್ಯಾಸ ಪವನ್ ಆಚಾರ್ಯ ಬೋಳೂರು,
ರಚನೆ ಮತ್ತು ನಿರ್ದೇಶನ ಹರ್ಷಿತ್ ಸೋಮೇಶ್ವರ, ನಿರ್ಮಾಣ ಲಂಚ್ ಲಾಲ್, ಲೋಬಜೆಟ್ ಪ್ರೊಡಕ್ಷನ್, ಸಹ ನಿರ್ಮಾಣ: ಕಿಶೋರ್ ಡಿ ಶೆಟ್ಟಿ, ರಜನೀಶ್ ಕೋಟ್ಯಾನ್.

Leave a Reply

Your email address will not be published. Required fields are marked *

error: Content is protected !!