ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌: ಕೇಂದ್ರದ ಬಿಜೆಪಿ ನಾಯಕರ ಋಣ ತೀರಿಸಿದ ರಾಜ್ಯಪಾಲರು – ಸುರೇಶ್ ಶೆಟ್ಟಿ

ಉಡುಪಿ: ನಮ್ಮ ರಾಜ್ಯದ ರಾಜ್ಯಪಾಲರಿಂದಲೇ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ ರಾಜ್ಯಪಾಲರು ತಾವು ರಾಜ್ಯಪಾಲರು ಎಂಬುದನ್ನು ಮರೆತು ನಮ್ಮ ರಾಜ್ಯ ಸರ್ಕಾರದ ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ.

ರಾಜ್ಯದ ರಾಜ ಭವನವನ್ನು ಬೀದಿಗೆ ತಂದು ನಿಲ್ಲಿಸಿ ರಾಜ ಭವನದ ಘನತೆಯನ್ನು ಕುಗ್ಗಿಸಿರುತ್ತಾರೆ. ಬಿಜೆಪಿ ನಾಯಕರ ಕುತಂತ್ರದ ಆಟಕ್ಕೆ ರಾಜಭವನ ಬಲಿಯಾಗುತ್ತಿರುವುದು ನಮ್ಮ ರಾಜ್ಯದ ದುರಾದೃಷ್ಟ. ರಾಜ್ಯದ ಕಾಂಗ್ರೆಸ್ ಪಕ್ಷದ ಆಡಳಿತವನ್ನು ನಮ್ಮ ಸರಕಾರ ಜನರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ನೋಡಿ ಸಹಿಸಲಾಗದೆ, ಯಶಸ್ವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ಕಂಡು ಕಂಗಾಲದ ಕೇಂದ್ರದ ಬಿಜೆಪಿ ನಾಯಕರು ರಾಜ್ಯಪಾಲರ ಮುಖೇನ ಬಹುಮತವುಳ್ಳ ಕಾಂಗ್ರೆಸ್ ಪಕ್ಷದ ಸರಕಾರವನ್ನು ಉರುಳಿಸಲುಯತ್ನಿಸುತ್ತಿದ್ದಾರೆ.

ಭ್ರಷ್ಟಾಚಾರದ ಪಿತಾಮಹ ಎನಿಸಿಕೊಂಡ ಜೈಶ್ರೀರಾಮ್ ಎಂದು ನಕಲಿ ಪರಶುರಾಮನ ಮೂರ್ತಿಯನ್ನು ಸೃಷ್ಟಿಸಿದ ಮಾಜಿ ಸಚಿವ ಸುನಿಲ್ ಕುಮಾರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕತೆ ಇದೆಯೇ?. ತಮ್ಮ 5 ವರ್ಷದ ಆಡಳಿತದಲ್ಲಿ ಈ ಹಿಂದೆ 40 ಶೇ. ಕಮಿಷನ್ ನುಂಗಿ, ಕೊಬ್ಬಿದ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?.

ನಮ್ಮ ನಾಯಕರ ಹಿಂದೆ ಕೋಟ್ಯಾಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದಾರೆ ಎಂಬುದನ್ನು ಈ ಬಿಜೆಪಿಯ ನಾಯಕರು ಮೊದಲು ತಿಳಿಯಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!