ಸಕಲೇಶಪುರ ಬಳಿ ಗುಡ್ಡ ಕುಸಿತ: ಆ.19- 20ರ ಕಾರವಾರ-ಬೆಂಗಳೂರು ರೈಲು ಸಂಚಾರ ರದ್ದು
ಉಡುಪಿ: ಮೈಸೂರು ವಿಭಾಗದ ನೈರುತ್ಯ ರೈಲ್ವೆಗೆ ಸೇರಿದ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರ ಬಾಳ್ಳುಪೇಟೆ ಬಳಿ ಸಂಭವಿಸಿದ ಗುಡ್ಡ ಕುಸಿತದ ದುರಸ್ತಿ ಕಾಮಗಾರಿ ಇನ್ನೂ ಮುಂದುವರಿದಿರುವ ಹಿನ್ನೆಲೆ ಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ಆ.19ರ ಸಂಚಾರವನ್ನು ನೈಋತ್ಯ ರೈಲ್ವೆಯ ಸೂಚನೆಯಂತೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರದ್ದಾದ ರೈಲುಗಳ ವಿವರ
*ರೈಲು ನಂ.16595 ಕೆಎಸ್‌ಆರ್ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ ರೈಲಿನ ಆ.18 ಮತ್ತು 19ರ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲಾಗಿದೆ.
*ರೈಲು ನಂ.16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಆ.18 ಮತ್ತು 19ರ ಸಂಚಾರ ಸಂಪೂರ್ಣ ರದ್ದು.
*ರೈಲು ನಂ.01595 ಕಾರವಾರ- ಮಡಗಾಂವ್ ವಿಶೇಷ ರೈಲಿನ ಆ.18, 19, 20ರ ಹಾಗೂ ರೈಲು ನಂ.01596 ಮಡಗಾಂವ್- ಕಾರವಾರ ವಿಶೇಷ ರೈಲಿನ ಆ.18 ಮತ್ತು 19ರ ಸಂಚಾರ ಸಂಪೂರ್ಣ ರದ್ದು.
*ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು- ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಆ.18 ಮತ್ತು 19ರ ಸಂಚಾರ ಸಂಪೂರ್ಣ ರದ್ದು.
*ರೈಲು ನಂ.16586 ಮುರ್ಡೇಶ್ವರ- ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಆ.18 ಮತ್ತು 19ರ ಸಂಚಾರ ಸಂಪೂರ್ಣ ರದ್ದು.
*ರೈಲು ನಂ.16515 ಕೆಎಸ್‌ಆರ್ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲಿನ ಆ.19ರ ಸಂಚಾರ ಸಂಪೂರ್ಣ ರದ್ದು.
*ರೈಲು ನಂ.16516 ಕಾರವಾರ- ಕೆಎಸ್‌ಆರ್ ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಆ.20ರ ಸಂಚಾರವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.