ನಿಯಮಿತ ಆರೋಗ್ಯ ತಪಾಸಣೆ ಇವತ್ತಿನ ಅಗತ್ಯತೆಯಾಗಿದೆ- ಡಾ. ನೀ.ಬೀ.ವಿಜಯ ಬಲ್ಲಾಳ್
ಉಡುಪಿ: ಅಂಬಲ್ಪಾಡಿ ಹೆಲ್ಪ್‌ಲೈನ್, ಅಜಯ್ ಕಪ್ಪೆಟ್ಟು, ಅಜಿತ್ ಕಪ್ಪೆಟ್ಟು, ಸವಿತಾ ಡಯಾಗ್ನೋಸ್ಟಿಕ್ ಸೆಂಟರ್, ಶ್ರೀಹರಿ ನೇತ್ರಾಲಯ ಮತ್ತು ದಿಯಾ ಪಾಲಿಕ್ಲಿನಿಕ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಂಬಲಪಾಡಿ ದಿಯಾ ಪಾಲಿಕ್ಲಿನಿಕ್ ನಲ್ಲಿ ಇಂದು ನಡೆಯಿತು.
ಅಂಬಲಪಾಡಿ ಮಹಾಕಾಳಿ ಜನಾರ್ಧನ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನೀ.ಬೀ.ವಿಜಯ ಬಲ್ಲಾಳ್ ಅವರು ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿ ಇವತ್ತಿನ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲಿಯೇ ಜನರಲ್ಲಿ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಇತ್ಯಾದಿ ಕಂಡುಬರುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಯುವಕರು ಹೃದಯಸಂಬಂಧಿ ಹಾಗೂ ಇತರ ಕಾರಣಗಳಿಂದ ಮರಣ ಹೊಂದುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಆಹಾರ, ಜೀವನ ಶೈಲಿಯೂ ಇದಕ್ಕೆ ಒಂದು ಕಾರಣವಾಗಿದೆ. ನಿಯಮಿತ ಆರೋಗ್ಯ ತಪಾಸಣೆ ಇವತ್ತಿನ ಅಗತ್ಯತೆ ಆಗಿದೆ ಎಂದರು.
ದಿಯಾ ಪಾಲಿಕ್ಲಿನಿಕ್ ನ ವೈದ್ಯರಾದ ಡಾ.ಅಶೋಕ್ ಎಚ್, ಶ್ರೀಹರಿ ನೇತ್ರಾಲಯದ ವೈದ್ಯರಾದ ಡಾ. ರೂಪಶ್ರೀ ರಾವ್, ಅನು ಡೆಂಟಲ್ ಕೇರ್ ನ ಡಾ. ಅನುಪಮಾ, ಸವಿತಾ ಡಯಾಗ್ನೋಸ್ಟಿಕ್ ಸೆಂಟರ್ ನ ಆಶಾ, ಸಪ್ನಾ, ಅಂಬಲ್ಪಾಡಿ ಹೆಲ್ಪ್ ಲೈನ್ ನ ಅಜಯ್ ಕಪ್ಪೆಟ್ಟು, ಪಂಚಾಯತ್ ಸದಸ್ಯರಾದ ಸುನೀಲ್ ಕಪ್ಪೆಟ್ಟು, ಚೈತನ್ಯ ಫೌಂಡೇಶನ್ ನ ಸುನೀಲ್ ಸಾಲ್ಯಾನ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು. ಆಜಿತ್ ಕಪ್ಪೆಟ್ಟು ಸ್ವಾಗತಿಸಿ ವಂದಿಸಿದರು.