ಅಂಬಲಪಾಡಿ ಹೆಲ್ಪ್ ಲೈನ್: ಆ.18 ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಅಂಬಲಪಾಡಿ ಹೆಲ್ಪ್ ಲೈನ್ ವತಿಯಿಂದ ಆ.18 ರಂದು ಆನಂದ ರಾವ್ ರಸ್ತೆಯಲ್ಲಿರುವ ದಿಯಾ ಪಾಲಿಕ್ಲಿನಿಕ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಿಗ್ಗೆ 7.00 ರಿಂದ 11.00 ಗಂಟೆಯ ವರೆಗೆ ಮಧುಮೇಹ, ರಕ್ತದೊತ್ತಡ (BP), ಕಣ್ಣಿನ ತಪಾಸಣೆ, ದಂತ ಆರೋಗ್ಯ ತಪಾಸಣೆ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕಾಗಿ ಸಂಘಟಕರಾದ ಅಜಯ್ ಕಪ್ಪೆಟ್ಟು ಮತ್ತು ಅಜಿತ್ ಕಪ್ಪೆಟ್ಟು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99169 27700, 8904080224