ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅ. ಸೊಸೈಟಿಗೆ “ಸಾಧನಾ ಪ್ರಶಸ್ತಿ”

ಉಡುಪಿ: ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ. 2023-24 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸತತ 2ನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಗುರುತಿಸಲ್ಪಟ್ಟು ಆ.14 ರಂದು ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಲೂವಿಸ್ ಲೋಬೋ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂದೀಪ್ ಫೆರ್ನಾಂಡೀಸ್ ಜಂಟಿಯಾಗಿ “ಸಾಧನಾ ಪ್ರಶಸ್ತಿ” ಯನ್ನು ಸ್ವೀಕರಿಸಿದರು.

ಈ ಸಂದರ್ಭ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಆಡಳಿತ ಮಂಡಳಿ ಸದಸ್ಯರು, ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ, ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಸಂಘದ ಉಪಾಧ್ಯಕ್ಷರಾದ ಜೇಮ್ಸ್ ಡಿ’ಸೋಜರವರು ಉಪಸ್ಥಿತರಿದ್ದರು.

1997 ನೇ ಇಸವಿಯಲ್ಲಿ ಆರಂಭಗೊಂಡ ಸಂಘವು ತನ್ನ ಯಶಸ್ವಿ 27ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ. 2023-24 ನೇ ಸಾಲಿನಲ್ಲಿ ರೂ.84.00 ಲಕ್ಷ ನಿವ್ವಳ ಲಾಭಾಂಶವನ್ನು ಗಳಿಸಿ, ತನ್ನೆಲ್ಲಾ ಸದಸ್ಯರಿಗೆ ಶೇ.17 ರಷ್ಟು ಡಿವಿಡೆಂಡನ್ನು ವಿತರಿಸಲಾಗಿದೆ. ಉಡುಪಿ ಸೂಪರ್ ಬಜಾರ್‌ನಲ್ಲಿ ಆಡಳಿತ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಉಡುಪಿ, ಮಲ್ಪೆ, ಉದ್ಯಾವರ ಹಾಗೂ ಶಿರ್ವದಲ್ಲಿ ಈಗಾಗಲೇ ಶಾಖೆಗಳನ್ನು ಹೊಂದಿದ್ದು, ನೂತನ ಹೂಡೆ-ಕೆಮ್ಮಣ್ಣು ಶಾಖೆಯು ಆ. 31 ರಂದು ಉದ್ಘಾಟನೆಗೊಳ್ಳಲಿದೆ.

ಈ ಸಾಧನೆಯನ್ನು ಮಾಡುವಲ್ಲಿ ಸಹಕರಿಸಿದ ಸಂಘದ ನೆಚ್ಚಿನ ಆಡಳಿತ ಮಂಡಳಿ ನಿರ್ದೇಶಕರಿಗೂ,
ಸದಸ್ಯರಿಗೂ, ಗ್ರಾಹಕರಿಗೂ, ಹಿತೈಷಿಗಳಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಅಧ್ಯಕ್ಷರು ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!