ತ್ರಿವರ್ಣ ಧ್ವಜ ತೆಗೆಯುವಾಗ ವಿದ್ಯುತ್ ತಗುಲಿ ಧರ್ಮಗುರು ಮೃತ್ಯು
ಕಾಸರಗೋಡು: ಇಲ್ಲಿನ ಮುಳ್ಳೇರಿಯಾದ ಇನ್‌ಫೆಂಟ್ ಜೀಸಸ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಫಾ.ಕುಡಿಲಿಲ್ ಮ್ಯಾಥ್ಯೂ(30) ಅವರು ಗುರುವಾರ ವಿದ್ಯುತ್ ಅವಘಡಕ್ಕೆ ಒಳಗಾಗಿ ನಿಧನರಾದರು.
ಚರ್ಚ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕೊನೆಯಲ್ಲಿ ಧ್ವಜವನ್ನು ಮಡಚುತ್ತಿದ್ದಾಗ ಧ್ವಜಸ್ತಂಭ ಕುಸಿದ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ. ಧ್ವಜಸ್ತಂಭ ಹತ್ತಿರದ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ, ಫಾದರ್ ಮ್ಯಾಥ್ಯೂ ಅವರಿಗೆ ವಿದ್ಯುತ್ ಪ್ರವಹಿಸಿದೆ. ಈ ಅವಘಡ ಸಂದರ್ಭದಲ್ಲಿ ಅವರ ಜೊತೆಗಿದ್ದವರಿಗೂ ವಿದ್ಯುತ್ ಸ್ಪರ್ಶವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫ್ರಾ ಮುಲ್ಲರ್ ಆಸ್ಪತ್ರೆಗೆ ರವಾನಿಸಲಾಗಿದೆ.