ಹವ್ಯಾಸಿ ಭಾಗವತ ಹೆಜಮಾಡಿ ಹರಿಯಪ್ಪ ಶೆಣೈ ನಿಧನ

ಕಾಪು, ಆ.12: ಹೆಜಮಾಡಿ ಗುಂಡಿ ನಿವಾಸಿ ಹೆಜಮಾಡಿ ಹರಿಯಪ್ಪ ಶೆಣೈ (70) ಸೋಮವಾರ ನಿಧಾನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ,

ಗುಂಡಿ ಪ್ರಭಾಕರ್ ಶೆಣೈಯವರ ಪುತ್ರರಾದ ಹರಿಯಪ್ಪ ಶೆಣೈ, ಹವ್ಯಾಸಿ ಯಕ್ಷಗಾನ ಭಾಗವತರಾಗಿದ್ದು, ಸುರತ್ಕಲ್ ಮೇಳದಲ್ಲಿ 2 ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.

ಹವ್ಯಾಸಿ ಮೇಳಗಳಲ್ಲಿ ಭಾಗವತಿಕೆ ಮಾಡುತ್ತಿದ್ದ ಇವರು ಮಂಗಳೂರು ಆಕಾಶವಾಣಿಯ ಕಲಾವಿದರಾಗಿದ್ದರು. ಇವರು ಹೆಜಮಾಡಿ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಕ್ರೀಡಾಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

Leave a Reply

Your email address will not be published. Required fields are marked *

error: Content is protected !!