ಸಕಲೇಶಪುರ-ಬಲ್ಲುಪೇಟ್ ರೈಲ್ವೆ ಹಳಿಯ ಮೇಲೆ ಭೂ ಕುಸಿತ: ಎಲ್ಲಾ ರೈಲುಗಳ ಸಂಚಾರ ರದ್ದು
ಉಡುಪಿ: ಮಳೆಯಿಂದಾಗಿ ಮತ್ತೆ ಸಕಲೇಶಪುರ ಹಾಗೂ ಬಲ್ಲುಪೇಟ್ ನಡುವಿನ ರೈಲ್ವೆ ಹಳಿಯ ಮೇಲೆ ಭೂ ಕುಸಿತ ಉಂಟಾಗಿದೆ. ಈ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವಂತ ಎಲ್ಲಾ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಸಂಬಂಧ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಕಲೇಶಪುರ ಮತ್ತು ಬಲ್ಲುಪೇಟ್ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ / ಭಾಗಶಃ ರದ್ದುಪಡಿಸಲಾಗಿದೆ ಮತ್ತು ಈ ಕೆಳಗಿನಂತೆ ತಿರುಗಿಸಲಾಗಿದೆ ಎಂದಿದೆ.
ಈ ರೈಲುಗಳ ಸಂಚಾರ ರದ್ದು
1.ರೈಲು ಸಂಖ್ಯೆ 16596 ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 11.08.2024 ರಂದು ರದ್ದಾಗಿದೆ.
2. ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲು ದಿನಾಂಕ 11.08.2024 ರಂದು ರದ್ದಾಗಿದೆ.
3.ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ರಂದು ರದ್ದಾಗಿದೆ.
4.ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ರಂದು ರದ್ದಾಗಿದೆ.
5.ರೈಲು ಸಂಖ್ಯೆ 16576 ಮಂಗಳೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ರಂದು ರದ್ದಾಗಿದೆ.
ಈ ರೈಲು ಅಲ್ಪಾವಧಿಯಲ್ಲಿ ಕೊನೆ
1. ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು 11.08.2024 ರಂದು ಪ್ರಾರಂಭವಾಗಿದ್ದು, ಮಂಗಳೂರು ಜಂಕ್ಷನ್ನಲ್ಲಿ ಅಲ್ಪಾವಧಿಯಲ್ಲಿ ಕೊನೆಗೊಂಡಿದೆ.
2. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು 11.08.2024 ರಂದು ಬಾಗಲಕೋಟೆಯಲ್ಲಿ ನಿಲುಗಡೆಯಾಗಿದೆ.
ಈ ರೈಲುಗಳ ಮಾರ್ಗ ಬದಲಾವಣೆ
1. ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು 11.08.2024 ರಂದು ಪ್ರಾರಂಭವಾಗಿದ್ದು, ಮಂಗಳೂರು ಜಂಕ್ಷನ್ನಲ್ಲಿ ಅಲ್ಪಾವಧಿಯಲ್ಲಿ ಕೊನೆಗೊಂಡಿದೆ.
2. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು 11.08.2024 ರಂದು ಬಾಗಲಕೋಟೆಯಲ್ಲಿ ನಿಲುಗಡೆಯಾಗಿದೆ.
ಈ ರೈಲುಗಳ ಮಾರ್ಗ ಬದಲಾವಣೆ
1. ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು 11.08.2024 ರಂದು ಪ್ರಾರಂಭವಾಗಿದ್ದು, ಮಂಗಳೂರು ಸೆಂಟ್ರಲ್, ಶೋರನೂರು, ಈರೋಡ್, ಸೇಲಂ, ಜೋಲಾರ್ಪೆಟ್ಟೈ ಮತ್ತು ಬಂಗಾರಪೇಟೆ ಮೂಲಕ ತಿರುಗಿದೆ.
2. ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ರೈಲು ದಿನಾಂಕ 11.08.2024 ರಂದು ಬಂಗಾರಪೇಟೆ, ಜೋಲಾರ್ಪೆಟ್ಟೈ, ಸೇಲಂ, ಈರೋಡ್ ಮತ್ತು ಶೋರನೂರ್ ಮೂಲಕ ತಿರುಗಲಿದೆ.