ನನಗೆ ದೆಹಲಿಯಿಂದ ಮಾಹಿತಿ ಬಂದಿದೆ, ಉಪ ಚುನಾವಣೆ ಫಲಿತಾಂಶ ಬಳಿಕ ಸಿಎಂ ಬದಲಾವಣೆ ಖಚಿತ: ಸಿದ್ದರಾಮಯ್ಯ
ಮೈಸೂರು: ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಎರಡು ದಿನಗಳ ಪ್ರವಾಸಕ್ಕಾಗಿ ನಗರಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈ ಕಮಾಂಡ್ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುತ್ತಾರೆ.ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯೋದಿಲ್ಲ. ನನಗೆ ತುಂಬು ನಂಬಿಕೆ ಇದೆ ಯಡಿಯೂರಪ್ಪ ಬದಲಾಗುತ್ತಾರೆ ಎಂಬುದು ಖಚಿತ. ತಮಗೆ ದೆಹಲಿಯಿಂದಿ ರುವ ಮಾಹಿತಿ ಆಧಾರದ ಮೇಲೆ ಈ ಮಾಹಿತಿ ನೀಡುತ್ತಿದ್ದೇನೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಅದು ಒಂದು ಕಾರಣ ಇರಬಹುದು. ಹಲವು ದಿನದಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಇದೆ. ಹಾಗಾಗಿ ಉಪಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೇಳಗಿಳಿ ಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ವರ್ಷ ಶಾಲೆಗಳನ್ನ ಆರಂಭಿಸೋದು ಬೇಡ.ಇದು ಸರ್ಕಾರಕ್ಕೆ ನನ್ನ ವೈಯುಕ್ತಿಕ ಸಲಹೆ.ಆನ್‌ಲೈನ್ ಕ್ಲಾಸ್ ಮಾಡಿ ಎಲ್ಲರನ್ನು ಪಾಸ್ ಮಾಡಲಿ. ಸಂಪೂರ್ಣ ಕೊರೊನಾ ಮುಕ್ತವಾದ ನಂತರ ಶಾಲೆಗಳನ್ನ ಆರಂಭಿಸಲು ಅಡ್ಡಿಯಿಲ್ಲ.ತರಾತುರಿಯಲ್ಲಿ ಶಾಲೆ ಆರಂಭಿಸೋದು ಬೇಡವೆಂದು ಸಚಿವರಿಗೆ ಸಲಹೆ ನೀಡಿದರು.
ಎರಡೂ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಶಿರಾದಲ್ಲಿ ಜಯಚಂದ್ರ ಗೆಲ್ತಾರೆ. ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯೂ ಇತ್ತು. ಜನ ನಮ್ಮ ಸರ್ಕಾರ ಮತ್ತು ಈಗಿನ ಸರ್ಕಾರವನ್ನು ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಇದು ಕಾಂ ಗ್ರೆಸ್ ಪರವಾದ ಮತಗಳಾಗಿವೆ. ಶಿರಾದಲ್ಲಿ ಕಳೆದ ಬಾರಿ ಅಪಪ್ರಚಾರ ಆಗಿತ್ತು.ಆರ್ ಆರ್ ನಗರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಈ ಜತೆಗೆ ನಾವೆಲ್ಲ ಪ್ರಚಾರ ಮಾಡಿದಾಗಲು ಜನರು ಕಾಂಗ್ರೆಸ್ ಪರ ಒಲವು ತೋರಿದ್ದರು. ಈ ಎಲ್ಲ ಕಾರಣದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ಭವಿಷ್ಯ ನುಡಿದರು.
ಅಮೆರಿಕಾದ ಅಧ್ಯಕ್ಷರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ನಡೆಯೋದಿಲ್ಲ. ಟ್ರಂಪ್ ಖಚಿತವಾಗಿ ಸೋಲು ಅನುಭವಿಸುತ್ತಾರೆ. ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೋಳಿಕೊಂಡು ಮತ ಕೇಳಿದ್ದರು. ಅಮೆರಿಕಾದ ಚುನಾವಣೆಯೇ ಬೇರೆ. ಅಲ್ಲಿನ ಜನ ಮೋದಿ ನೋಡಿ ಮತ ಚಲಾಯಿಸುವುದಿಲ್ಲ. ಅನಿವಾಸಿ ಭಾರತೀಯರೂ ಮೋದಿ ಮುಖ ನೋಡಿಕೊಂಡು ಮತದಾನ ಮಾಡಲ್ಲ.
ಭಾರತದಲ್ಲೇ ಮೋದಿ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ. ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಯುವ ಜನರು ಮೋದಿ ವಿರುದ್ಧ ಸಿಟ್ಟು ಹೊರಹಾಕುತ್ತಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ನಿತೀಶ್ ಕುಮಾರ್ ಚುನಾವಣೆ ಪ್ರಚಾರದ ವೇಳೆ ಅವರ ಮೇಲೆ ಈರುಳ್ಳಿ ಎಸೆದಿದ್ದಾರೆ ಹೀಗಾಗಿ ಮೋದಿ ಅವರ ಮಾತಿಗೆ ಜನ ಕಿಮ್ಮತ್ತು ಕೊಡುವುದಿಲ್ಲವೆಂದು ಅವರು ಪ್ರತಿಪಾದಿಸಿದರು.