ಉಡುಪಿ: ಮಗು ಮಾರಾಟ- ತಂದೆ ತಾಯಿ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು
ಉಡುಪಿ, ಆ.10: ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಲ್ಲಿ ತಂದೆ ತಾಯಿ ಸಹಿತ ಮೂವರ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.19ರಂದು ಪೆರಂಪಳ್ಳಿಯ ಶೀಂಬ್ರಾ ಭಟ್ರಕೋಡಿಯ ರಾಬಿಯಾ ಬಾನು ಮತ್ತು ಖಾಲಿದ್ ಸಯ್ಯದ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಆ ಹೆಣ್ಣು ಮಗುವನ್ನು ದಂಪತಿ ಮುಲ್ಕಿಯ ನಿವಾಸಿ ವಾಜಿದ್ ಎಂಬವರಿಗೆ ಕಾನೂನು ಬಾಹಿರವಾಗಿ ನೀಡಿರುವುದಾಗಿ ದೂರಲಾಗಿದೆ.
ರಾಬಿಯಾ ಬಾನು ಮತ್ತು ಖಾಲಿದ್ ಸಯ್ಯದ್ ಮಗುವನ್ನು ಅನಧಿಕೃತವಾಗಿ ಮಾರಾಟ ಮಾಡಿದ್ದು ಮತ್ತು ವಾಜಿದ್ ಮಗುವನ್ನು ಅನಧಿಕೃತವಾಗಿ ಪಡೆದುಕೊಂಡಿರುವುದಾಗಿ ದೂರಲಾಗಿದೆ.