ಉಡುಪಿ: ಇಲಿಜ್ವರಕ್ಕೆ ಪರ್ಕಳದ ನಿವಾಸಿ ಬಲಿ

Oplus_131072

ಉಡುಪಿ, ಆ.8: ಪರ್ಕಳದ 52 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಶಂಕಿತ ಇಲಿಜ್ವರಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಜ್ವರಕ್ಕಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಆ.6ರ ರಾತ್ರಿ ಮೃತಪಟ್ಟಿದ್ದಾರೆ. ವೈದ್ಯರು ನೀಡಿರುವ ವರದಿಯಂತೆ ಅವರು ಶಂಕಿತ ಇಲಿಜ್ವರವೂ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ.

ಮಳೆಗಾಲದಲ್ಲಿ ಕರಾವಳಿ ಭಾಗದಲ್ಲಿ ಇಲಿಗಳ ಮಲಮೂತ್ರಗಳ ಮೂಲಕ ವ್ಯಾಪಕವಾಗಿ ಹರಡುವ ಇಲಿಜ್ವರಕ್ಕೆ ಕಳೆದ ಜನವರಿಯಿಂದ ಇದುವರೆಗೆ ಮೂವರು ಬಲಿಯಾಗಿದ್ದಾರೆ. ಜನವರಿಯಲ್ಲಿ ನಿಟ್ಟೂರಿನ ಶಾಲಾ ಬಾಲಕನ ಬಳಿಕ ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವೃದ್ಧರು ಹಾಗೂ ಸಾಯಬರಕಟ್ಟೆಯಲ್ಲಿ ಪುರುಷರೊಬ್ಬರು ರೋಗಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಇಲಿಜ್ವರದ 149 ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ.

ಯಾವುದೇ ಜ್ವರ ಕಂಡುಬಂದ ಸಂದರ್ಭದಲ್ಲಿ ತಕ್ಷಣ ಸೂಕ್ತ ಚಿಕಿತ್ಸೆ ಪಡೆದರೆ ಯಾವುದೇ ಅಪಾಯವಿರುವುದಿಲ್ಲ ಎಂದಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡದ್, ಇಲಿಗಳ ಮಲಮೂತ್ರಗಳು ನೀರಿನೊಂದಿಗೆ ಬೆರೆತಾಗ ಅದರ ಮೂಲಕ ರೋಗಾಣುಗಳು ಮನುಷ್ಯನನ್ನು ಪ್ರವೇಶಿಸುತ್ತವೆ. ಕೃಷಿ ಕೂಲಿಕಾರ್ಮಿಕರು, ಬರಿಗಾಲಿನಲ್ಲಿ ನಡೆಯುವವರ ಕಾಲಿನ ಮೂಲಕ ಈ ರೋಗಾಣುಗಳು ಹೆಚ್ಚಾಗಿ ಮನುಷ್ಯ ದೇಹವನ್ನು ಪ್ರವೇಶಿಸುತ್ತವೆ ಎಂದವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!