ಕಾಪು: ಎರಡು ವರ್ಷದ ಮಗಳೊಂದಿಗೆ ಮಹಿಳೆ ನಾಪತ್ತೆ

Oplus_131072

ಕಾಪು: ಎರಡು ವರ್ಷದ ಮಗಳೊಂದಿಗೆ ಮಹಿಳೆ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಮಹಿಳೆ ನಸೀದಾಳಿಗೆ ತನ್ನ ಗಂಡನೊಂದಿಗೆ ವಿಚ್ಛೇದನವಾಗಿದ್ದು, ಸುಮಾರು 1 ವರ್ಷದಿಂದ ತನ್ನ 2 ವರ್ಷದ ಮಗಳೊಂದಿಗೆ ತಾಯಿಯ ಮನೆಯಲ್ಲಿಯೇ ವಾಸವಾಗಿದ್ದಾರೆ.

ಸುಮಾರು 20 ದಿನಗಳಿಂದ ತನ್ನ ಕುಟುಂಬದೊಂದಿಗೆ ಮಲಾರು ಗ್ರಾಮದ ಪಕೀರ್ಣಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ, ವಾಸವಾಗಿದ್ದು, ಆ.04 ರಂದು ಬೆಳಿಗ್ಗೆ ನಸೀದಾಳು ಮನೆಯಲ್ಲಿ, ಯಾರೂ ಇಲ್ಲದ ಸಮಯ ಮನೆಯಲಿದ್ದ ಚಿನ್ನ ಹಣ ಹಾಗೂ ಆಕೆಯ ಮೊಬೈಲ್ ನ್ನು ತೆಗೆದುಕೊಂಡು ತನ್ನ ಮಗಳನ್ನು ಕರೆದುಕೊಂಡು ಹೋದವಳು ಸಂಜೆಯಾದರು ಮನೆಗೆ ಬಾರದೆ ಇದ್ದು ಸ್ನೇಹಿತರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಎಲಿಯೂ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!