ಉಡುಪಿ: ಲಕ್ಷಾಂತರ ರೂ.ಮೌಲ್ಯದ ಕೃಷಿ ಯಂತ್ರ ಕಳವು

ಉಡುಪಿ : ನಗರದ ಕರಾವಳಿ ಬೈಪಾಸ್ ಬಳಿಯ ಇಸೀ ಲೈಫ್ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯ ಗೂಡ್ಸ್ ರಿಕ್ಷಾದಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಯಂತ್ರವನ್ನು ಕಳ್ಳರು ಆ.4ರಂದು ರಾತ್ರಿ ವೇಳೆ ಕಳವು ಮಾಡಿರುವ ಬಗ್ಗೆ ದೂರು‌ ದಾಖಲಾಗಿದೆ.

ತೀರ್ಥಹಳ್ಳಿಯಲ್ಲಿರುವ ಇನ್ನೊಂದು ಶಾಖೆಯಿಂದ ನಾಲ್ಕು ವಿವಿಧ ಬಗೆಯ ಕೃಷಿ ಸಾಮಾಗ್ರಿಗಳನ್ನು ರಿಕ್ಷಾದಲ್ಲಿ ತುಂಬಿಕೊಂಡು ಉಡುಪಿಯಲ್ಲಿರುವ ಸಂಸ್ಥೆಯ ಶಾಖೆಗೆ ತಂದು ರಿಕ್ಷಾದಲ್ಲೇ ಇರಿಸಿದ್ದು, ಇದರಲ್ಲಿದ್ದ ಒಂದು ಸಾಮಾಗ್ರಿಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!