ಮಣಿಪಾಲ: ಕಾಲೇಜು ಪ್ರಾರಂಭಿಸದಂತೆ ಸಿಎಂ ಹೆಸರಲ್ಲಿ ನಕಲಿ ಈ-ಮೇಲ್

ಉಡುಪಿ (ಉಡುಪಿ ಟೈಮ್ಸ್ ವರದಿ): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪವರ ಹೆಸರಿನಲ್ಲಿ ನಕಲಿ ಈ-ಮೇಲ್ ಖಾತೆ ತೆರೆದು ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಗೆ ಈ -ಮೆಲ್ ಕಳಿಸಿದ್ದು, ದುಷ್ಕರ್ಮಿಯ ವಿರುದ್ಧ ಬುಧವಾರ ಪೊಲೀಸರಿಗೆ ದೂರು ನೀಡಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬ [email protected] ಹೆಸರಿನಿಂದ ಖಾತೆ ತೆರೆದು ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ಡೈರೆಕ್ಟರ್ ಹಾಗೂ ರಿಜಿಸ್ಟರ್ ಆದ ಡಾ.ನಾರಾಯಣ್ ಸಭಾಹಿತ್ ಅವರಿಗೆ ಈ-ಮೇಲ್ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಈ-ಮೇಲ್ ನಲ್ಲಿ “ಕಾಲೇಜುಗಳನ್ನು ಪುನಃ ತೆರೆಯುವ ಮಾಹೆ ಯೋಜನೆಗೆ ಸಂಬಂಧಿಸಿದಂತೆ ನಾಡಿನಾದ್ಯಂತ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಬಂದ ದೂರುಗಳಿಗೆ ಸಂಬಂಧಿಸಿದಂತೆ ನಾವು ಹಲವಾರು ಇಮೇಲ್‌ಗಳನ್ನು ಸ್ವೀಕರಿಸಿದ್ದೇವೆ. ಈಗಿನ ಪರಿಸ್ಥಿತಿ ನವೆಂಬರ್ / ಡಿಸೆಂಬರ್-2020 ರಲ್ಲಿ ಕಾಲೇಜುಗಳನ್ನು ತೆರೆಯಲು ಸೂಕ್ತವಲ್ಲ. 2 ನೇ ಜನವರಿ-2021 ರಂದು ಅಥವಾ ಅದಕ್ಕೂ ಮೊದಲು ಯಾವುದೇ ಕಾಲೇಜುಗಳನ್ನು ತೆರೆಯಲು ಅನುಮತಿ ಇಲ್ಲ ಎಂದು ಮಾಹೆ ಆಡಳಿತ ಮಂಡಳಿಗೆ ಅರಿವು ಮೂಡಿಸುವುದು ಈ ಮೇಲ್ ಉದ್ದೇಶವಾಗಿದೆ. ಅಲ್ಲದೆ 2 ನೇ ಜನವರಿ-2021 ರ ನಂತರ ಸಹ, ನೀವು ಕಾಲೇಜುಗಳನ್ನು ಮತ್ತೆ ತೆರೆಯಲು ಯೋಜಿಸುತ್ತಿದ್ದರೆ, ನೀವು ಪೋಷಕರ ಒಪ್ಪಿಗೆ ಪಡೆಯಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!