ಆ.8ರವರೆಗೆ ಕಾರವಾರ-ಬೆಂಗಳೂರು ರೈಲು ಸಂಚಾರ ರದ್ದು
ಉಡುಪಿ, ಆ.5: ಮೈಸೂರು ವಿಭಾಗದ ನೈರುತ್ಯ ರೈಲ್ವೆಗೆ ಸೇರಿದ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಅಲ್ಲದೇ ಪಶ್ಚಿಮ ಘಟ್ಟದ ಹಲವು ಕಡೆಗಳಲ್ಲಿ ರೈಲು ಹಳಿಗಳ ಮೇಲೆ ಮಣ್ಣು ಕುಸಿದಿರುವುದರಿಂದ ಹಳಿಗಳ ದುರಸ್ಥಿ ಕಾರ್ಯ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲಿ ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರವನ್ನು ಆ. 8ರವರೆಗೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರದ್ದಾದ ರೈಲುಗಳ ವಿವರ:
ರೈಲು ನಂ.16595 ಕೆಎಸ್‌ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆಗಸ್ಟ್ 7ರವರೆಗೆ ಸಂಪೂರ್ಣ ರದ್ದು.
ರೈಲು ನಂ.16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
ರೈಲು ನಂ.01595 ಕಾರವಾರ- ಮಡಗಾಂವ್ ಹಾಗೂ ರೈಲು ನಂ. 01596 ಮಡಗಾಂವ್-ಕಾರವಾರ ವಿಶೇಷ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು- ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆ.7ರವರೆಗೆ ಸಂಪೂರ್ಣ ರದ್ದು.
ರೈಲು ನಂ.16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
ರೈಲು ನಂ.16515 ಕೆಎಸ್‌ಆರ್ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲಿನ ಆ.7ರವರೆಗಿನ ಸಂಚಾರ ಸಂಪೂರ್ಣ ರದ್ದು.
ರೈಲು ನಂ.16516 ಕಾರವಾರ- ಕೆಎಸ್‌ಆರ್ ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಆ.8ರವರೆಗಿನ ಸಂಚಾರವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಪ್ರಕಟಣೆ ತಿಳಿಸಿದೆ.