ಮಲ್ಪೆ: ಸುಗಮ ಸಂಚಾರ ನಿರ್ವಹಣೆ ಹಿನ್ನೆಲೆ, ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ
ಉಡುಪಿ, ಆ.05: ಮಲ್ಪೆ ಬಂದರು ಹಾಗೂ ಮಲ್ಪೆ ಜಂಕ್ಷನ್‌ಗೆ ಸಂಬಂಧಿಸಿದಂತೆ ಸಂಚಾರ ನಿಯಂತ್ರಣ ಹಾಗೂ ಸುಗಮ ಸಂಚಾರ ನಿರ್ವಹಣೆ ಸಲುವಾಗಿ ಆಗಸ್ಟ್ 15 ರಿಂದ ಅಕ್ಟೋಬರ್ 15 ರ ವರೆಗೆ ಎರಡು ತಿಂಗಳ ಕಾಲ ಪ್ರಾಯೋಗಿಕವಾಗಿ ಈ ಕೆಳಕಂಡ ಮಾರ್ಗ ಬದಲಾವಣೆಮಾಡಿ ವಾಹನ ಸಂಚರಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಆದೇಶಿಸಿರುತ್ತಾರೆ.
ಐಸ್ ತುಂಬಿದ ವಾಹನ ಮತ್ತು ನೀರಿನ ವಾಹನ, ಇನ್ಸುಲೇಟರ್ ವಾಹನ, ಮೀನಿಗೆ ಸಂಬಂಧಿಸಿದ ಲಘು ಹಾಗೂ ಬೃಹತ್ ವಾಹನಗಳು, ಟೂರಿಸ್ಟ್ ವಾಹನಗಳು ಮಲ್ಪೆ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ರಾಜ್ ಫಿಶ್ ಮಿಲ್ ಕ್ರಾಸ್ ಮೂಲಕ ಕೊಳ, ಹನುಮಾನ್ ನಗರ ಮಾರ್ಗವಾಗಿ ಕೊಚ್ಚಿನ್ ಶಿಪ್ ಯಾರ್ಡ್ ಬಳಿ ಇರುವ ಗೇಟ್ ಮೂಲಕ ಒಳಗೆ ಪ್ರವೇಶಿಸಬೇಕು.
ಸಿಟಿಜನ್ ಸರ್ಕಲ್ ಕಡೆಯಿಂದ ಆಗಮಿಸುವ ಎಲ್ಲಾ ಐಸ್ ತುಂಬಿದ ವಾಹನ ಮತ್ತು ನೀರಿನ ವಾಹನ. ಇನ್ಸುಲೇಟರ್ ವಾಹನ, ಮೀನಿಗೆ ಸಂಬಂಧಿಸಿದ ಲಘು ವಾಹನ ಹಾಗೂ ಬೃಹತ್ ವಾಹನಗಳು, ಟೂರಿಸ್ಟ್ ವಾಹನಗಳು ಮಲ್ಪೆ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ರಾಜ್ ಫಿಶ್ ಮಿಲ್ ಕ್ರಾಸ್ ಮೂಲಕ ಕೊಳ, ಹನುಮಾನ್ ನಗರ ಮಾರ್ಗವಾಗಿ ಕೊಚ್ಚಿನ್ ಶಿಪ್‌ಯಾರ್ಡ್ ಬಳಿ ಇರುವ ಗೇಟ್ ಮೂಲಕ ಒಳಗೆ ಪ್ರವೇಶಿಸಬೇಕು.ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೊರಡಿಸಿರುವುದಾಗಿ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.