ಹಿರಿಯಡ್ಕ: 18 ವರ್ಷ ತಲೆಮರೆಸಿಕೊಂಡಿದ್ದ ಸುಲಿಗೆ ಪ್ರಕರಣದ ಆರೋಪಿ ಬಂಧನ
ಹಿರಿಯಡ್ಕ: 18 ವರ್ಷಗಳಿಂದ ಸುಲಿಗೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಸುಲಿಗೆ ಪ್ರಕರಣದ ಆರೋಪಿ ಕಾರ್ಕಳದ ಸುರೇಶ್ ಪುರುಷ(45)ನನ್ನು ಹಿರಿಯಡ್ಕ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ ಮರಬದ ರವರ ನೇತೃತ್ವದಲ್ಲಿ ಠಾಣಾ ಹೆಚ್ಸಿ ಗುರುರಾಜ್ ಸಿಹೆಚ್ಸಿ ದಯಾನಂದ ಪ್ರಭು ಹಾಗೂ ಸಿಪಿಸಿ ಕೃಷ್ಣ ಪೂಜಾರಿ ಯವರು ಆರೋಪಿತನನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.