ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ: ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ
ಢಾಕಾ: ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉದ್ನಿಗ್ನತೆ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು ‘ಸುರಕ್ಷಿತ ಸ್ಥಳ’ಕ್ಕಾಗಿ ಢಾಕಾ ಅರಮನೆ ತೊರೆದಿದ್ದಾರೆ ಎಂದು ಅವರ ನಿಕಟ ಮೂಲವೊಂದು ತಿಳಿಸಿದೆ. ಹಸೀನಾ ಆಡಳಿತದ ಮೇಲೆ ಹೆಚ್ಚುತ್ತಿರುವ ಅಶಾಂತಿ ಮತ್ತು ಒತ್ತಡದ ಮಧ್ಯೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಶೇಕ್ ಹಸೀನಾ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಶೇಖ್ ಹಸೀನಾ ಅವರ ಹಿರಿಯ ಸಲಹೆಗಾರರೊಬ್ಬರು ಸೋಮವಾರ ಎಎಫ್‌ಪಿಗೆ ತಿಳಿಸಿದ್ದಾರೆ. “ಪರಿಸ್ಥಿತಿ ಹೀಗಿದೆ. ಆದರೆ ಅದು ಹೇಗೆ ಸಂಭವಿಸುತ್ತದೆ ಎಂದು ನನಗೆ ತಿಳಿದಿಲ್ಲ” ಎಂದು ಹೆಸರು ಹೇಳಲು ಇಚ್ಚಿಸದ ಪ್ರಧಾನಿ ಅವರ ಹಿರಿಯ ಸಲಹೆಗಾರರೊಬ್ಬರು ಹೇಳಿದ್ದಾರೆ.
ಚುನಾಯಿತವಾಗದ ಸರ್ಕಾರ ತಡೆಗೆ ಭದ್ರತಾ ಪಡೆಗಳಿಗೆ ಬಾಂಗ್ಲಾ ಪ್ರಧಾನಿ ಪುತ್ರನ ಒತ್ತಾಯ: ಲಕ್ಷಾಂತರ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಂತೆ ಬೇರೆ ಸರ್ಕಾರ ರಚನೆಯಾಗದಂತೆ ತಡೆಯುವಂತೆ ಭದ್ರತಾ ಪಡೆಗಳನ್ನು ಹಸೀನಾ ಅವರ ಸಜೀಬ್ ವಾಝೆದ್ ಜಾಯ್ ಒತ್ತಾಯಿಸಿದ್ದಾರೆ.
ಜನರನ್ನು ಸುರಕ್ಷಿತವಾಗಿರಿಸುವುದು, ನಮ್ಮ ದೇಶವನ್ನು ಸುರಕ್ಷಿತವಾಗಿರಿಸುವುದು ಮತ್ತು ಸಂವಿಧಾನವನ್ನು ಎತ್ತಿಹಿಡಿಯುವುದು ನಿಮ್ಮ ಕರ್ತವ್ಯ ಎಂದು ಯುಎಸ್ ಮೂಲದ ಜಾಯ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಯಾವುದೇ ಚುನಾಯಿತವಾಗದ ಸರ್ಕಾರವನ್ನು ಒಂದು ನಿಮಿಷವೂ ಅಧಿಕಾರಕ್ಕೆ ಬರಲು ಬಿಡಬೇಡಿ, ಅದು ನಿಮ್ಮ ಕರ್ತವ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಶೇಕ್ ಹಸೀನಾ ಅವರನ್ನು ಅಧಿಕಾರದಿಂದ ಬಲವಂತವಾಗಿ ಹೊರಹಾಕಿದರೆ ಬಾಂಗ್ಲಾದೇಶದ ಪ್ರಗತಿಗೆ ಧಕ್ಕೆಯಾಗಬಹುದು ಎಂದು ತನ್ನ ತಾಯಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿರುವ ಜಾಯ್ ಎಚ್ಚರಿಸಿದ್ದಾರೆ. “ನಮ್ಮ ಅಭಿವೃದ್ಧಿ ಮತ್ತು ಪ್ರಗತಿ ಎಲ್ಲವೂ ಕಣ್ಮರೆಯಾಗುತ್ತದೆ. ಬಾಂಗ್ಲಾದೇಶವು ಅಲ್ಲಿಂದ ಹಿಂತಿರುಗಲು ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ