ಬಿಲ್ಲವ ಸೇವಾ ಸಂಘ ಕಡೆಕಾರು-ಕನ್ನರ್ಪಾಡಿ: ಆಟಿಡ್ ಒಂಜಿ ದಿನ ಕಾರ್ಯಕ್ರಮ

Oplus_131072

ಉಡುಪಿ: ಬಿಲ್ಲವ ಸೇವಾಸಂಘ ಕಡೆಕಾರು-ಕನ್ನರ್ಪಾಡಿ, ಮಹಿಳಾ ಘಟಕ, ಸಾಫಲ್ಯ ಟ್ರಸ್ಟ್, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್, ಚೈತನ್ಯ ಫೌಂಡೇಶನ್, ಲಯನ್ಸ್ ಕ್ಲಬ್ ಅಂಬಲಪಾಡಿ, ದುರ್ಗಾಂಬಿಕಾ ಯಕ್ಷಗಾನ ಮತ್ತು ಚೆಂಡೆ ಬಳಗ ಇದರ ಜಂಟಿ ಆಶ್ರಯದಲ್ಲಿ ಕಡೆಕಾರು ನಾರಾಯಣ ಗುರು ಸಮುದಾಯ ಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ. ಶಂಕರ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಿಕೇತನ ಅವರು ಮಾತನಾಡಿ ಆಟಿಯ ಸಮಯದಲ್ಲಿ ಜೀವನ ಪದ್ದತಿ, ಆಹಾರ ಕ್ರಮ, ಆಚರಣೆ-ವಿಚಾರಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿಕ ಗಣೇಶ್ ಪೂಜಾರಿ ಮತ್ತು ಯಮುನಾ ಸಾಲ್ಯಾನ್ ಕೊಳ ಅವರನ್ನು ಸನ್ಮಾನಿಸಲಾಯಿತು.

ಶಂಕರ್ ಜಿ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಡೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಸಾಫಲ್ಯ ಟ್ರಸ್ಟ್ ನ ನಿರುಪಮಾ ಪ್ರಸಾದ್ ಶೆಟ್ಟಿ, ಬಿಲ್ಲವ ಸೇವಾ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಶ್ರೀಧರ್, ಚೈತನ್ಯ ಫೌಂಡೇಶನ್ ಸುನೀಲ್ ಸಾಲ್ಯಾನ್, ಲಯನ್ಸ್ ಅಂಬಲಪಾಡಿ ಅಧ್ಯಕ್ಷ ತಾರಾನಾಥ್ ಸುವರ್ಣ, ದುರ್ಗಾಂಬಿಕಾ ಯಕ್ಷಗಾನ ಮತ್ತು ಚೆಂಡೆ ಬಳಗ ಸಂಚಾಲಕರಾದ ಗಂಗಾಧರ್ ಜಿ. ಕಡೇಕಾರು ಬಿಲ್ಲವ ಸೇವಾ ಸಂಘದ ಕಾರ್ಯದರ್ಶಿ ಜತಿನ್ ಕಡೇಕಾರ್ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಸದಸ್ಯರು ವಿವಿಧ ಬಗೆಯ ಆಟಿಯ ಖಾದ್ಯಗಳನ್ನು ತಯಾರಿಸಿ ಸಹಭೊಜನ ಸವಿದರು.
ಭಾಸ್ಕರ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು, ಸುಹಾಸಿನಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!