ಉಡುಪಿ ಆರೋಗ್ಯ ಇಲಾಖೆಯಿಂದ ನಕಲಿ ಡೆಂಟಲ್ ಕ್ಲಿನಿಕ್‌ಗೆ ದಾಳಿ: ಲ್ಯಾಬ್ ಸೀಝ್!
ಉಡುಪಿ:(ಉಡುಪಿ ಟೈಮ್ಸ್ ವರದಿ) ಸಿಟಿಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ದಂತ ಕ್ಲಿನಿಕ್‌ವೊಂದಕ್ಕೆ ಆರೋಗ್ಯ ಇಲಾಖೆ ದಾಳಿ ಮಾಡಿ, ಕ್ಲಿನಿಕ್‌ಗೆ ಬೀಗ ಜಡಿದಿದೆ.
ಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಸದಾನಂದ ಟವರ್‍ಸ್‌ನಲ್ಲಿ ಶಾಶ್ವತ್ ಡೆಂಟಲ್ ಕ್ಲಿನಿಕ್ & ಲ್ಯಾಬ್ ನಡೆಸುತ್ತಿದ್ದ ಗೋವಿದಂ ಭಂಡಾರಿ, ಯಾವುದೇ ವೈದ್ಯಕೀಯಾ ಪದವಿ ಹೊಂದದೆ ಕ್ಲಿನಿಕ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಗರತ್ನ ಅವರು ದಾಳಿ ನಡೆಸಿದ್ದರು.
ವೈದ್ಯಕೀಯ ಸಂಸ್ಥೆಯನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ನವೀಕರಣವನ್ನು ಮಾಡಿದ್ದು, ಶ್ವೇತಾ ಅವರು ಕ್ಲಿನಿಕ್‌ನ್ನು ನಡೆಸದೆ, ನಕಲಿ ವೈದ್ಯ ಗೋವಿದಂ ಭಂಡಾರಿ ನಡೆಸುತ್ತಿದ್ದರು. ಆದ್ದರಿಂದ ಆರೋಗ್ಯ ಇಲಾಖೆ ದಾಳಿ ಮಾಡಿ ಕ್ಲಿನಿಕ್ ಅನ್ನು ಸೀಝ್ ಮಾಡಿರುತ್ತಾರೆ.