ಮಲ್ಪೆ: ಬ್ರೇಕ್ ವೈಫಲ್ಯವಾದ ಬಸ್ ಸ್ಕೂಟಿಗೆ ಡಿಕ್ಕಿ- ನಿವೃತ್ತ ಶಿಕ್ಷಕ ಸ್ಥಳದಲ್ಲೇ ಮೃತ್ಯು

Oplus_131072
ಉಡುಪಿ, ಆ.01(ಉಡುಪಿ ಟೈಮ್ಸ್ ವರದಿ) ಕಲ್ಮಾಡಿಯಲ್ಲಿ ಖಾಸಗಿ ಬಸ್ನ ಬ್ರೇಕ್ ವೈಫಲ್ಯದಿಂದಾಗಿ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಕೊಪ್ಪಲತೋಟ ನಿವಾಸಿ, ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ನ ನಿವೃತ್ತ ದೈಹಿಕ ಭಾಸ್ಕರ ಸುವರ್ಣ(75) ಮೃತಪಟ್ಟ ದುರ್ದೈವಿ. ಗುರುವಾರ ಮಧ್ಯಾಹ್ನ ಆದಿಉಡುಪಿಯಿಂದ ಮಲ್ಪೆ ಕಡೆ ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಕಲ್ಮಾಡಿಯಲ್ಲಿ ಭಾಸ್ಕರ್ ಅವರಿಗೆ ಹಿಂದಿನಿಂದ ಬ್ರೇಕ್ ವೈಫಲ್ಯವಾದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ಸಿನ ಚಕ್ರಕ್ಕೆ ಸಿಲುಕಿದ ಭಾಸ್ಕರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಮೃತದೇಹವನ್ನು ಅಜ್ಜರಕಾಡು ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.