ಬ್ಯಾಂಕಿಂಗ್ ಜಾಲದ ಮೇಲೆ ransomware ದಾಳಿ:ಎಟಿಎಂ-ಯುಪಿಐ ಸೇವೆಯಲ್ಲಿ ವ್ಯತ್ಯಯ

ಹೊಸದಿಲ್ಲಿ: ಬ್ಯಾಂಕಿಂಗ್ ಜಾಲದ ಮೇಲೆ ransomware ದಾಳಿಯಿಂದಾಗಿ ಸುಮಾರು 300 ಭಾರತೀಯ ಸ್ಥಳೀಯ ಸಣ್ಣ ಬ್ಯಾಂಕ್‌ಗಳಲ್ಲಿ ಪಾವತಿ ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬ್ಯಾಂಕ್‌ಗಳ ಗ್ರಾಹಕರು ಎಟಿಎಂಗಳಲ್ಲಿ ನಗದು ಹಿಂಪಡೆಯುವುದು ಅಥವಾ ಯುಪಿಐ ಬಳಸುವಂತಹ ಪಾವತಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ransomware ದಾಳಿಯು ದೇಶದಾದ್ಯಂತ ಸಣ್ಣ ಬ್ಯಾಂಕ್‌ಗಳಿಗೆ ಬ್ಯಾಂಕಿಂಗ್ ತಂತ್ರಜ್ಞಾನ ವ್ಯವಸ್ಥೆಯನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ. ಇತರ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಸಂಜೆ ತಡವಾಗಿ ಬಿಡುಗಡೆಯಾದ ಹೇಳಿಕೆಯಲ್ಲಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಈ ಮಾಹಿತಿ ನೀಡಿದೆ. ಈ ದಾಳಿಯಿಂದಾಗಿ RTGS ಮತ್ತು UPI ಪಾವತಿಗಳಂತಹ ಎಲ್ಲಾ ಆನ್‌ಲೈನ್ ವಹಿವಾಟುಗಳು ಪರಿಣಾಮ ಬೀರಲಿದೆ. ಸಿ-ಎಡ್ಜ್ ಅನ್ನು ಅವಲಂಬಿಸಿರುವ ಗುಜರಾತ್‌ನ 17 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ಭಾರತದ ಸುಮಾರು 300 ಬ್ಯಾಂಕ್‌ಗಳು ಕಳೆದ ಎರಡು ಮೂರು ದಿನಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟದ ಅಧ್ಯಕ್ಷ ದಿಲೀಪ್ ಸಂಘಾನಿ ತಿಳಿಸಿದರು.

“ಆರ್‌ಟಿಜಿಎಸ್ ಮತ್ತು ಯುಪಿಐ ಪಾವತಿಗಳಂತಹ ಎಲ್ಲಾ ಆನ್‌ಲೈನ್ ವಹಿವಾಟುಗಳು ಪರಿಣಾಮ ಬೀರುತ್ತವೆ. ಕಳುಹಿಸುವವರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಆದರೆ ಸ್ವೀಕರಿಸುವವರ ಖಾತೆಯಲ್ಲಿ ಜಮೆಯಾಗುವುದಿಲ್ಲ” ಎಂದು ಸಂಘಾನಿ ಹೇಳಿದರು.

ಸಿ-ಎಡ್ಜ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಮರುಸ್ಥಾಪನೆ ಕಾರ್ಯವನ್ನು ತ್ವರಿತವಾಗಿ ನಡೆಸಲಾಗುತ್ತಿದೆ ಮತ್ತು ಕಡ್ಡಾಯ ಭದ್ರತಾ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

C-Edge, SBI ಮತ್ತು TCS ನಡುವಿನ ಜಂಟಿ ಉದ್ಯಮವಾಗಿದ್ದು, ಸಹಕಾರಿ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು C-Edge ಸೇವೆ ಬಳಸುತ್ತದೆ. ಈಗಾಗಲೇ ransomware ಅನ್ನು ಪತ್ತೆಹಚ್ಚಲಾಗಿದ್ದು ಮತ್ತು ಬ್ಯಾಂಕಿಂಗ್ ಸೇವೆ ಸಹಜ ಸ್ಥಿತಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಈ ಘಟನೆಯಿಂದ ಹೊರತಾಗಿಯೂ ಯಾವುದೇ ಆರ್ಥಿಕ ನಷ್ಟ ಸಂಭವಿಸಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!