ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಸತತ ಮೂರನೇ ಬಾರಿ ಭಾರತ ಮೂಲದ ರಾಜಾ ಕೃಷ್ಣಮೂರ್ತಿ ಆಯ್ಕೆ
ವಾಷಿಂಗ್ಟನ್: ಭಾರತ ಮೂಲದ ಡೆಮಾಕ್ರಟಿಕ್ ಕಾಂಗ್ರೆಸ್ ಅಭ್ಯರ್ಥಿ ರಾಜಾ ಕೃಷ್ಣಮೂರ್ತಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಸತತ ಮೂರನೇ ಬಾರಿ ಮರು ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ಜನಿಸಿದ್ದ 47 ವರ್ಷದ ಕೃಷ್ಣಮೂರ್ತಿ ಲಿಬರ್ಟೇರಿಯನ್ ಪಕ್ಷದ ಪ್ರೆಸ್ಟನ್ ನೆಲ್ಸನ್ ಅವರನ್ನು ಅನಾಯಾಸವಾಗಿ ಸೋಲಿಸಿದ್ದಾರೆ. ಇತ್ತೀಚಿನ ವರದಿ ಬಂದಾಗ ಅವರಿಗೆ ಶೇಕಡಾ 71ರಷ್ಟು ಮತ ಸಿಕ್ಕಿದೆ.
ಕೃಷ್ಣಮೂರ್ತಿಯವರ ಪೋಷಕರು ತಮಿಳು ನಾಡಿನವರು. ಇವರು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ 2016ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು.ಈ ಮಧ್ಯೆ ಯುಎಸ್ ಕಾಂಗ್ರೆಸ್ ಸದಸ್ಯ ಅಮಿ ಬೆರ ಕ್ಯಾಲಿಫೋರ್ನಿಯಾ ಕ್ಷೇತ್ರದಿಂದ ಸತತ 5ನೇ ಬಾರಿಗೆ ಮತ್ತು ರೊ ಖನ್ನಾ ಸತತ ಮೂರನೇ ಬಾರಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಮರು ಆಯ್ಕೆ ಬಯಸಿದ್ದಾರೆ.
ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಕಾಂಗ್ರೆಸ್ಸಿನ ಪ್ರಮೀಳಾ ಜಯಪಾಲ್ ವಾಷಿಂಗ್ಟನ್ ರಾಜ್ಯದಿಂದ ಸತತ ಮೂರನೇ ಬಾರಿ ಆಯ್ಕೆ ಬಯಸಿದ್ದಾರೆ. ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ ರಾಜ್ಯಗಳಲ್ಲಿ ಮತದಾನ ಮುಂದುವರಿದಿದ್ದು ಫಲಿತಾಂಶ ಇನ್ನು ಕೆಲವೇ ಹೊತ್ತಿನಲ್ಲಿ ಹೊರಬೀಳಲಿದೆ. ಅರಿಜೋನಾ ರಾಜ್ಯದಿಂದ ಡಾ ಹಿರಾಲ್ ಟಿಪಿರ್ನೆನಿ ಮೂರನೇ ಬಾರಿಗೆ ಆಯ್ಕೆ ಬಯಸಿದ್ದಾರೆ.
ಡೆಮಾಕ್ರಟಿಕ್ ಪಾರ್ಟಿಯ ಕುಲಕರ್ಣಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರೊಯ್ ನೆಹ್ಲ್ಸ್ 22ನೇ ಕಾಂಗ್ರೆಸ್ ಜಿಲ್ಲೆ ಟೆಕ್ಸಾಸ್ ನಿಂದ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.