ಬೈಂದೂರು: ಬಾವಿಯಲ್ಲಿ ದಿಢೀರ್ ಮೊಸಳೆ ಪ್ರತ್ಯಕ್ಷ -ಬಿಚ್ಚಿಬಿದ್ದ ಸ್ಥಳೀಯರು

Oplus_131072

ಉಡುಪಿ: ಬೈಂದೂರು ತಾಲೂಕಿನ ನಾಗೂರಿನ ರತ್ನಾಕರ ಉಡುಪ ಎಂಬವರ ಬಾವಿಯಲ್ಲಿ ದಿಢೀರೆಂದು ಮೊಸಳೆ ಪ್ರತ್ಯಕ್ಷವಾಗಿದ್ದು, ಇದನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದರು.

ಬೈಂದೂರು ತಹಶೀಲ್ದಾರ್ ಪ್ರದೀಪ್, ಠಾಣಾಧಿಕಾರಿ ಹಾಗೂ ಆರ್.ಎಫ್.ಓ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಮೊಸಳೆ ಬಲೆಗೆ ಸಿಗದ ಕಾರಣ ಬೋನಿನಲ್ಲಿ ಕೋಳಿ ಮಾಂಸ ಹಾಕಿ ಮೊಸಳೆ ಹಿಡಿಯುವ ಪ್ರಯತ್ನ ಮುಂದುವರಿದೆ.

ತೋಟದ ಸಿಹಿ ನೀರಿನ ಬಾವಿಯಲ್ಲಿ ಮೊಸಳೆ ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಈ ಭಾಗದಲ್ಲಿ ಮೊಸಳೆಗಳು ಕಾಣ ಸಿಗುವುದೇ ಅಪರೂಪ.‌ ಅಂಥದ್ದರಲ್ಲಿ ಬಾವಿಯಲ್ಲಿ ಇದು ಹೇಗೆ ಪ್ರತ್ಯಕ್ಷವಾಯಿತು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಸದ್ಯ ಕೋಳಿ ಮಾಂಸ ಹಾಕಿ ಮೊಸಳೆ ಹಿಡಿಯುವ ಯತ್ನವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ನಂತರ ಸೃಷ್ಟಿಯಾದ ನೆರೆ ಹಿನ್ನೆಲೆಯಲ್ಲಿ ಮೊಸಳೆ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಅಪರೂಪದ ಮೊಸಳೆ ನೋಡಲು ಸಾಕಷ್ಟು ಜನ ಸ್ಥಳದಲ್ಲಿ ನೆರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!