ಮದ್ಯಕ್ಕೆ ವಿಷ ಬೆರೆಸಿಕೊಂಡು ಯಕ್ಷಗಾನ ಸ್ತ್ರೀವೇಷಧಾರಿ ಆತ್ಮಹತ್ಯೆ
ಉಡುಪಿ : ಮಂದಾರ್ತಿ, ಮಡಾಮಕ್ಕಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ನೀರ್ಜೆಡ್ಡು (26) ಮದ್ಯಕ್ಕೆ ಇಲಿಪಾಶನ ಹಾಕಿ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿದ ಭರವಸೆಯ ಕಲಾವಿದರಾಗಿದ್ದ ಇವರು ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು. ಇವರು ತಾಯಿ, ತಮ್ಮ ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.