ಪತ್ರಕರ್ತ ಜವಾಬ್ದಾರಿ ಈ ಸಮಾಜದಲ್ಲಿ ಬಹುಮುಖ್ಯ: ಡಿ.ಆರ್. ರಾಜು

Oplus_131072

ಕಾರ್ಕಳ: ಮೂಲಭೂತ ಸೌಕರ್ಯ ವಂಚಿತರಾಗಿರುವ ಬಗ್ಗೆ ಪತ್ರಕರ್ತ ಮುಖೇನ ಸರ್ಕಾರದ ಗಮನ ಸೆಳೆಯವ ಪ್ರಯತ್ನವಾಗಬೇಕು. ಪತ್ರಕರ್ತ ಜವಾಬ್ದಾರಿ ಈ ಸಮಾಜದಲ್ಲಿ ಬಹುಮುಖ್ಯವಾಗಿದೆ. ಸಮಾಜಮುಖಿ ,ಸಮಾಜ ಕಾರ್ಯನಾಡಿಗೆ, ಜಗತ್ತಿಗೆ ತಲುಪಿಸುವ ಕಾರ್ಯದಲ್ಲಿ ಪತ್ರಕರ್ತ ಪಾತ್ರ ಅಗತ್ಯ. ಬಿಲ್ಲವ ಸೇವಾ ಸಮಾಜ ಸಂಘ ಅಧ್ಯಕ್ಷ ಡಿ ಆರ್ ರಾಜು ಹೇಳಿದರು.

ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ವತಿಯಿಂದ ಜೋಡುರಸ್ತೆ ಉಷಾ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಪ್ರತಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತಿ ಶಿಕ್ಷಕಿ ಸಾವಿತ್ರಿ ಮನೋಹರ್ ಮಾತನಾಡಿ
ಪತ್ರಕರ್ತರು ಎಂದರೆ ಜನರ ಜೀವನದ ಪ್ರತಿ ಬಿಂಬ ಪತ್ರಕರ್ತ ಬದುಕು ತುಂಬಾ ಕಠಿಣ ಪತ್ರಕರ್ತರು
ಬಹಳ ಎಚ್ಚರಿಕೆಯಿಂದ ಕೆಲಸಮಾಡ ಬೇಕು. ಪ್ರಸ್ತುತ ದಿನಗಳಲ್ಲಿಯು ಪತ್ರಿಕೋದ್ಯಮ ಬೆಳವಣಿಗೆ ಕಂಡಾಗ ತುಂಬಾ ಸಂತೋಷವಾಗುತ್ತೆ ಎಂದರು. ಇದೇ ವೇಳೆ ಹಿರಿಯ ಪತ್ರಕರ್ತರ ಹಾಗೂ ಕಾಂಗ್ರೆಸೆಗ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ಅವರಿಗೆ ಸನ್ಮಾನಿಸಲಾಯಿತು.

ಪತ್ರಕರ್ತರ ಸಂಘದಿಂದ ಸನ್ಮಾನಿತರಾದ ಹಿರಿಯ ನಿವೃತ್ತ ಪತ್ರಕರ್ತ ಬಿಪಿನ್ ಚಂದ್ರಪಾಲ್ ಮಾತನಾಡಿ, ಪತ್ರಕರ್ತ ಎಲ್ಲರೊಡನೆ ಬೆರೆಯಬೇಕು. ಯಾರ ಪರ ಅಥವಾ ಪಕ್ಷಪಾತಿಯಾಗದೇ ಪತ್ರಿಕಾಧರ್ಮ ಪಾಲನೆ ಮಾಡಬೇಕಾದ ಪ್ರಮುಖ ಹೊಣೆಗಾರಿಕೆ ಇದೆ ಎಂದರು. ಪತ್ರಕರ್ತನಾದವನು ನಿಷ್ಠೂರ,ನೇರ ನಡೆನುಡಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ,ಸುದ್ದಿ ಸಂಗ್ರಹಣೆಯ ಜತೆಗೆ ಸಮಾಜಕ್ಕೆ ಯಾವ ಸುದ್ದಿ ಶೀಘ್ರವಾಗಿ ತಲುಪಬೇಕೋ ಅದನ್ನು ಪ್ರಕಟಿಸುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.

ಯಾರ ಪರ ಅಥವಾ ಪಕ್ಷಪಾತಿಯಾಗದೇ ಪತ್ರಿಕಾಧರ್ಮ ಪಾಲನೆ ಮಾಡಬೇಕಾದ ಪ್ರಮುಖ ಹೊಣೆಗಾರಿಕೆ ಇದೆ ಎಂದರು. ಪತ್ರಕರ್ತನಾದವನು ನಿಷ್ಠೂರ,ನೇರ ನಡೆನುಡಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ,ಸುದ್ದಿ ಸಂಗ್ರಹಣೆಯ ಜತೆಗೆ ಸಮಾಜಕ್ಕೆ ಯಾವ ಸುದ್ದಿ ಶೀಘ್ರವಾಗಿ ತಲುಪಬೇಕೋ ಅದನ್ನು ಪ್ರಕಟಿಸುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.

ಪತ್ರಕರ್ತ ಸಮಾಜದ ಏಳಿಗೆಗಾಗಿ ಚಿಂತನೆ ಮಾಡಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು
ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ವಹಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಕೆ ಎಂ ಕಲೀಲ್ ಜಿಲ್ಲಾ ಸಮಿತಿ ಸದಸ್ಯ ಉದಯ ಕುಮಾರ್
ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

error: Content is protected !!