ಉಡುಪಿ: ಆ.3ರಿಂದ ಟೀಮ್ ನೇಷನ್ ಫಸ್ಟ್ ನಿಂದ ಉಚಿತ ತರಬೇತಿ ಶಿಬಿರ “ಯೋಧ-2024”
ಉಡುಪಿ: ಟೀಮ್ ನೇಷನ್ ಫಸ್ಟ್ ವತಿಯಿಂದ ಭಾರತೀಯ ರಕ್ಷಣಾ ಪಡೆಗೆ ಸೇರಲು ಇಚ್ಚಿಸುತ್ತಿರುವ ಯುವಕ ಹಾಗೂ ಯುವತಿಯರಿಗೆ ಉಚಿತ ತರಬೇತಿ ಶಿಬಿರ “ಯೋಧ 2024” ಆ.3 ರಿಂದ 18 ರವರೆಗೆ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದೆ.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನೆಯ ಅಧ್ಯಕ್ಷ ಸೂರಜ್ ಕಿದಿಯೂರು ಅವರು, ಆ.3 ರಂದು ಬೆಳಿಗ್ಗೆ 9.30ಕ್ಕೆ ಶಾಸಕ ಯಶ್ಪಾಲ್ ಸುವರ್ಣ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದರು. ಮೂರನೇ ವರ್ಷದ ಈ ಶಿಬಿರದಲ್ಲಿ ಸುಮಾರು 130 ಶಿಬಿರಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಶಿಬಿರಾರ್ಥಿಗಳಿಗೆ ಊಟ, ವಸತಿ, ಆರೋಗ್ಯ ತಪಾಸಣೆ, ಯೋಗ ಶಿಬಿರ, ದೈಹಿಕ ಶಿಕ್ಷಣ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ತರಗತಿಯನ್ನು ಉಚಿತವಾಗಿ ನೀಡಲಾಗುವುದು. ಈ ಶಿಬಿರದಲ್ಲಿ ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7353308181 ಗೆ ಆ.2 ರ ಒಳಗೆ ನೊಂದಾಯಿಸಿಕೊಳ್ಳುವಂತೆ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಡಾ. ಅತುಲ್ ಹಾಗೂ ಪಿ.ಬಿ.ರಂಗನಾಥ್ ಉಪಸ್ಥಿತರಿದ್ದರು.