ಬೆಂಗಳೂರು: ಹಿರಿಯ ಬಾಲಿವುಡ್ ನಟ ಫರಾಜ್ ಖಾನ್ ನಿಧನ
ಬೆಂಗಳೂರು(ಉಡುಪಿ ಟೈಮ್ಸ್ ವರದಿ): ಕಳೆದ ಒಂದು ತಿಂಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್ ನ ಖ್ಯಾತ ನಟ ಫರಾಜ್ ಖಾನ್ (50 ) ನಿಧನ ಹೊಂದಿದ್ದಾರೆ. ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟ ಬುಧವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಫರಾಜ್ ಖಾನ್ ಕಳೆದ ಒಂದು ವರ್ಷದಿಂದ ವಿಪರೀತ ಕೆಮ್ಮು ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಳಿಕ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.
90ರ ದಶಕದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದ ಫರಾಜ್ ಖಾನ್ ಮೆಹಂದಿ, ಫರೇಬ್, ದುಲ್ಹಾನ್ ಬನೂ ಮೈನ್ ತೇರಿ ಮತ್ತು ಚಂದ್ ಬುಜ್ ಗಯಾ ಸಿನಿಮಾಗಳ ಮೂಲಕ ಖ್ಯಾತಿಗಳಿಸಿದ್ದರು. ಫರಾಜ್ ಸುಮಾರು ಒಂದು ವರ್ಷದಿಂದ ಕೆಮ್ಮು ಮತ್ತು ಎದೆ ನೋವಿನಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು . ಮೆದುಳಿನಲ್ಲಿ ಹರ್ಪಿಸ್ ಸೋಂಕು ಪತ್ತೆಯಾಗಿದ್ದು, ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಜೊತೆಗೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು.
ಫರಾಜ್ ಖಾನ್ ವಿಷಯ ತಿಳಿದು ಬಾಲಿವುಡ್ ನಟಿ ಪೂಜಾ ಭಟ್ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು. ವಿಷಯ ತಿಳಿದ ನಟ ಸಲ್ಮಾನ್ ಖಾನ್ ಫರಾಜ್ ಖಾನ್ ಗೆ ಆರ್ಥಿಕ ಸಹಾಯ ಮಾಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಫರಾಜ್ ಖಾನ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.