ಉಡುಪಿ ಸಿಟಿ ಬಸ್ ನೌಕರರ ಸಂಘದ ಅಧ್ಯಕ್ಷರಾಗಿ ನವೀನ್ ಸುವರ್ಣ ಆಯ್ಕೆ
ಉಡುಪಿ: ಸಿಟಿ ಬಸ್ ನೌಕರರ ತುರ್ತು ಸೇವಾ ಸಂಘ ಉಡುಪಿ ಇದರ ಅಧ್ಯಕ್ಷರಾಗಿ 3ನೇ ಬಾರಿ ನವೀನ್ ಸುವರ್ಣ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ರಶಾಂತ್, ಕಾರ್ಯದರ್ಶಿಯಾಗಿ ಕಾರ್ತಿಕ್, ಕೋಶಾಧಿಕಾರಿಯಾಗಿ ಶೇಕ್ ಮುಕ್ತಾರ್ (ಮುನ್ನ) ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಭಾನುವಾರ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ನವೀನ್ ಸುವರ್ಣ ಸಂಘದ ಸದಸ್ಯರಲ್ಲಿ ಹಾಗೂ ಸಿಟಿ ಬಸ್ ಮಾಲಕರಲ್ಲಿ ಸಂಘವನ್ನು ಮುನ್ನಡೆಸುವುದಕ್ಕೆ ಸಹಕಾರ ಕೋರಿದರು, ತನ್ನನ್ನು ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು.