ಆಚರಣೆ, ಸಂಪ್ರದಾಯದ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವಂತಾಗಬೇಕು- ಸವಿತಾ ಸದಾನಂದ

ಬೆಳ್ಮಣ್ : ಆಟಿ ತಿಂಗಳ ವಿವಿಧ ತಿನಿಸುಗಳು ನಮ್ಮ ದೇಹಕ್ಕೆ ಅವಶ್ಯಕವಾಗಿದೆ. ತುಳುವರ ನಂಬಿಕೆ, ಸಂಪ್ರದಾಯಗಳು ವಿಶೇಷವಾಗಿದೆ. ಅಂದು ಆಟಿ ದಿನಗಳು, ಸಂಭ್ರಮದ ದಿನಗಳಾಗಿರಲಿಲ್ಲ. ಇಂದು ಎಲ್ಲವೂ ಮರೆತು ಹೋಗುತ್ತಿರುವ ಕಾಲಘಟ್ಟದಲ್ಲಿ, ಪ್ರತಿ ಆಚರಣೆ, ಸಂಪ್ರದಾಯಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನ ನಾವುಮಾಡಬೇಕಾಗಿದೆ ಎಂದು ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಮುಖ್ಯಶಿಕ್ಷಕಿ ಸವಿತಾ ಸದಾನಂದ ಪೂಜಾರಿ ಹೇಳಿದರು.

ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಮುಂಡ್ಕೂರು-ಮುಲ್ಲಡ್ಕ-ಇನ್ನಾ ಇದರ ವತಿಯಿಂದ ಭಾನುವಾರ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಆಟಿಡೊಂಜಿ ದಿನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ತೋಟ ಮನೆ ಉಷಾ ವಾಸು ಅಂಚನ್ ದೀಪ ಬೆಳಗಿಸಿ ಕಾರ್ಯಕ್ರಮನ್ನು ಉದ್ಘಾಟಿಸಿದರು.

ಬಿಲ್ಲವ ಯವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವಸಂತ ಪೂಜಾರಿ ಮುಂಬೈ, ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಕೃಷ್ಣ ಪೂಜಾರಿ ಬಂಟ್ರೊಟ್ಟು, ಬಿಲ್ಲವ ಸಂಘದ ಗೌರವ ಅಧ್ಯಕ್ಷ ಶ್ರೀಧರ್ ಸನಿಲ್, ಗ್ರಾಮ ಪಂಚಾಯತಿ ಸದಸ್ಯೆ ಶಶಿಕಲ ಕೃಷ್ಣ ಸಾಲ್ಯಾನ್, ಮಹಿಳಾ ವೇದಿಕೆಯ ಕೋಶಾಧಿಕಾರಿ ರಂಜನಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್ಸೆಸೆಲ್ಸಿಯಲ್ಲಿ ಶೇ. 98 ಅಂಕಗಳಿಸಿದ ದಿಶಾ ಎಸ್. ಅವರನ್ನು ಸನ್ಮಾನಿ ಸಲಾಯಿತು. ಬಳಿಕ ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಿ.ಚಿಂದು ಪೂಜಾರ್ತಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಸ್ವಾಗತಿಸಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧ ವಂದಿಸಿದರು. ಉದಯ ಕುಮಾರ್ ಮುಂಡ್ಕೂರ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಆಟಿ ತಿಂಗಳಲ್ಲಿ ಮಾಡುವ 20ಕ್ಕೂ ಅಧಿಕ ತಿಂಡಿ ತಿನಿಸುಗಳನ್ನು ಉಣಬಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!