ಜೋಗಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು: ದೇವರಾಜ್ ಜೋಗಿ
ಬೈಂದೂರು: ಜೋಗಿ ಸಮಾಜ ಸೇವಾ ಸಂಘ ಇದರ 2ನೇ ವರ್ಷದ ವಾರ್ಷಿಕೋತ್ಸವ ಮತ್ತು ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ, ಸಭಾ, ಸನ್ಮಾನ, ವಿದ್ಯಾರ್ಥಿ ವೇತನ, ಬಹುಮಾನ ವಿತರಣೆ ಹಾಗೂ ವಾರ್ಷಿಕ ಮಹಾಸಭೆ ಭಾನುವಾರ ನಾವುಂದ ಸ್ಕಂದ ಸಭಾಂಗಣದಲ್ಲಿ ನಡೆಯಿತು.
ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿಯ ದೇವರಾಜ್ ಜೋಗಿ ಬೈಂದೂರು 2ನೇ ವರ್ಷದ ವಾರ್ಷಿಕೋತ್ಸವ ಮತ್ತು ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ, ಸಭಾ, ಸನ್ಮಾನ, ವಿದ್ಯಾರ್ಥಿ ವೇತನ, ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಇಂದು ಸಂಘಟಿತರಾಗಿದ್ದರೂ ನಮ್ಮ ಸಮಾಜಕ್ಕೆ ಸಿಗಬೇಕಾದ ಅವಕಾಶ, ಸೌಲಭ್ಯಗಳು ಸಿಗುತ್ತಿಲ್ಲ. ಮುಖ್ಯವಾಗಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕಿದೆ. ಈ ದಿಸೆಯಲ್ಲಿ ಜೋಗಿ ಸಮಾಜದ ಎಲ್ಲರೂ ಒಂದಾಗಬೇಕು. ಭವಿಷ್ಯದಲ್ಲಿ ಯುವಘಟಕದ ಸ್ಥಾಪನೆ ಮಾಡುವ ಮೂಲಕ ಜೋಗಿ ಸಮಾಜದ ಯುವಕ, ಯುವತಿಯರ ಬೆಳವಣಿಗೆಗೆ ಕೆಲಸ ಮಾಡುವ ಗುರಿ ಇದೆ. ನಾವೆಲ್ಲರೂ ಸಮಾಜ ಕಟ್ಟುವಂತಹ ದೃಷ್ಟಿಕೋನವನ್ನು ಇಟ್ಟು ಕೊಂಡು ಕೆಲಸ ಮಾಡಿದರೆ ಅಸಾಧ್ಯ ಯಾವುದೂ ಇಲ್ಲ ಎಂದು ಹೇಳಿದರು.
ಜೋಗಿ ಸಮಾಜ ಸೇವಾ ಸಂಘ ರಿ ಬೈಂದೂರು ಅಧ್ಯಕ್ಷ ದಯಾನಂದ ಎಸ್ ಜೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎನ್ ಶ್ರೀನಿವಾಸ ಜೋಗಿ ಬೆಂಗಳೂರು, ತೆಂಕಬೆಟ್ಟು ಹಳಗೇರಿ ಕಾಲಭೈರವ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಎಸ್ ನಾಗೇಶ್ ಜೋಗಿ ಕೆಳಾಮನೆ, ತೆಂಕಬೆಟ್ಟು ಹಳಗೇರಿ ಕಾಲಭೈರವ ಸೇವಾ ಸಮಿತಿ ಅಧ್ಯಕ್ಷ ರಾಮ ಜೋಗಿ ತೆಂಕಬೆಟ್ಟು, ಕುಂದಾಪುರ ಜೋಗಿ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘ ರಿ ಅಧ್ಯಕ್ಷ ಶೇಖರ ಬಳೆಗಾರ ಕಟ್ ಬೆಲ್ತೂರು,ಕುಂದಾಪುರ ಜೋಗಿ ಸಮಾಜ ಸೇವಾ ಸಂಘ ಅಧ್ಯಕ್ಷ ಪಾಂಡುರಂಗ ಜೋಗಿ ಕಟಪಾಡಿ, ಉಡುಪಿ – ಕಾರ್ಕಳ ಜೋಗಿ ಮಹಿಳಾ ಘಟಕ ಅಧ್ಯಕ್ಷೆ ರಜನಿ ಜೋಗಿ ಸೂಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ನಾಗರಿಕರ ಗಣಪಯ್ಯ ಜೋಗಿ ತೆಂಕಬೆಟ್ಟು ಇವರಿಗೆ ಸಂಘದ ವತಿಯಿಂದ ವಿಶೇಷ ಗೌರವಿಸಲಾಯಿತು. ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಸೀತಾ ಜೋಗಿ ನಾವುಂದ, ಸಮಾಜ ಸೇವಕರಾದ ಟಿ.ಎಸ್ ನಾಗೇಶ್ ಜೋಗಿ ಕೆಳಾಮನೆ, ಕೆ ಎನ್ ಶ್ರೀನಿವಾಸ ಜೋಗಿ ಬೆಂಗಳೂರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಜೋಗಿ ಸಮಾಜ ಸೇವಾ ಸಂಘ ರಿ ಬೈಂದೂರು ವತಿಯಿಂದ 75% ತೇರ್ಗಡೆ ಹೊಂದಿದರು ಜೋಗಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತರಿಸಲಾಯಿತು. ಆಷಾಢ ಒಂದು ದಿನ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶರಧಿ ಜೋಗಿ ಕೊಲ್ಲೂರು ಪ್ರಾರ್ಥನೆಗೈದರು. ಗಣೇಶ್ ಜೋಗಿ ಅರೆಶಿರೂರು ಸ್ವಾಗತಿಸಿದರು. ಜೋಗಿ ಸಮಾಜ ಸೇವಾ ಸಂಘ ರಿ ಬೈಂದೂರು ರಮೇಶ್ ಜೋಗಿ ಕೆಳಾಮನೆ ಹಳಗೇರಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ್ ಜೋಗಿ ವಂದಿಸಿದರು. ರಾಘವೇಂದ್ರ ಜೋಗಿ ಕಟ್ ಬೇಲ್ತೂರು ಕಾರ್ಯಕ್ರಮ ನಿರೂಪಿಸಿದರು.