ಉಡುಪಿ: ವಿದ್ಯುತ್ ಹರಿದು ಪೈಂಟರ್ ಮೃತ್ಯು

ಬೈಂದೂರು, ಜು.27: ಲಾರಿ ಚಾಸಿಸ್ ಪೇಂಟ್ ಮಾಡುವ ವೇಳೆ ವಿದ್ಯುತ್ ಆಘಾತದಿಂದ ಪೈಂಟರೊಬ್ಬರು ಮೃತಪಟ್ಟ ಘಟನೆ ನಾವುಂದ ಎಂಬಲ್ಲಿ ಶುಕ್ರವಾರ ನಡೆದಿದೆ.

ಮೃತರನ್ನು ಗಂಗೊಳ್ಳಿ ನಿವಾಸಿ ಸಂದೀಪ್(40) ಎಂದು ಗುರುತಿಸಲಾಗಿದೆ. ಇವರು ಟ್ರಾನ್ಸ್ಪೋರ್ಟ್ ಸಂಸ್ಥೆಯೊಂದರ ಲಾರಿಗಳ ಪೇಂಟಿಂಗ್ ಮಾಡಲು ಆಗಮಿಸಿದ್ದು, ಈ ವೇಳೆ ಪೇಂಟಿಂಗ್ ಕಂಪ್ರೆಸರ್ ಯಂತ್ರದಲ್ಲಿ ವಿದ್ಯುತ್ ಹರಿದ ಪರಿಣಾಮ ವಿದ್ಯುತ್ ಶಾಕ್‌ಗೆ ಒಳಗಾದ ಇವರು ತೀವ್ರವಾಗಿ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!