ಮಣಿಪಾಲ: ಹಾಡುಹಗಲೇ ಎಕೆಎಮ್‌ಎಸ್ ಬಸ್ ಮಾಲಕನ ಹತ್ಯೆಗೆ ವಿಫಲ ಯತ್ನ
ಮಣಿಪಾಲ: (ಉಡುಪಿ ಟೈಮ್ಸ್ ವರದಿ)ಹಾಡುಗಲೇ ಬಸ್ ಮಾಲಕನ ಕಛೇರಿಗೆ ನಾಲ್ವರು ಅಪರಿಚಿತರು ಮಾರಕಾಸ್ತ್ರದೊಂದಿಗೆ ಬಂದು ಬೆದರಿಸಿ ಹೋದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿ ಕಾರ್ಯಚರಿಸುತ್ತಿರುವ ಎಕೆಎಮ್‌ಎಸ್ ಬಸ್‌ನ ಕಛೇರಿಗೆ ಕಂದು ಬಣ್ಣದ ಡಸ್ಟರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರು ಹಿಡಿದು ಬಂದಿದ್ದರು ಎನ್ನಲಾಗಿದೆ.
ಕಛೇರಿಯಲ್ಲಿ ಏಳೆಂಟು ಮಂದಿ ಬಸ್ ಮಾಲಕನ ಸಹವರ್ತಿಗಳು ಇದ್ದ ಕಾರಣ ದುಷ್ಕರ್ಮಿಗಳು ಕೇವಲ ಬೆದರಿಸಿ ಪರಾರಿಯಾಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಬಸ್ ಮಾಲಕ ಸೈಪುದ್ದೀನ್ ಈಗಾಗಲೇ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ದುಷ್ಕರ್ಮಿಗಳು ಬಂದಿದ್ದ ಕಾರು ಮೂಡುಬೆಳ್ಳೆ ಕಡೆ ಪರಾರಿಯಾಗಿದೆಂದು ತಿಳಿದುಬಂದಿದೆ.