ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ಗೆ ಹಿನ್ನಡೆ – ಜೋ ಬೈಡನ್ ಮುನ್ನಡೆ

ವಾಷಿಂಗ್ಟನ್: ಇಡೀ ವಿಶ್ವದ ಗಮನವನ್ನು ಸೆಳೆದಿರುವ ಅಮೆರಿಕಾದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಬಹುತೇಕ ಪೂರ್ಣಗೊಂಡಿದ್ದು, ಮೊದಲ ಹಂತದ ಫಲಿತಾಂಶ ಹೊರಬೀಳುತ್ತಿದೆ. ಹಾಲಿ ಅಧ್ಯಕ್ಷರಾಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 114 ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ 192 ಮತ ಪಡೆದು ಇಬ್ಬರ ನಡುವೆ ತೀವ್ರ ಪೈಪೊಟಿ ಎದುರಾಗಿದೆ. 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯೋಮಿಂಗ್, ಕನ್ಸಾಸ್, ಮಿಸೌರಿ, ಮಿಸ್ಸಿಸ್ಸಿಪ್ಪಿ, ಕೆಂಟುಕಿ, ಇಂಡಿಯಾನಾ, ಸೌಥ್ ಕರೋಲಿನಾ ದಲ್ಲಿ ಜಯಗಳಿಸಿದ್ದಾರೆ.  

ಇನ್ನು ಜೋ ಬೈಡನ್ ಅವರು ವಾಷಿಂಗ್ಟನ್, ಟೆಕ್ಸಾಸ್, ಜಾರ್ಜಿಯಾ, ಫ್ಲೋರಿಡಾ, ಹ್ಯಾಂಪ್ ಶೈರ್, ವರ್ಮೊಂಟ್, ಒರೆಗಾನ್, ಕ್ಯಾಲಿಫೋರ್ನಿಯಾ ಮತ್ತು ಇಲಿನಾಯ್ಸ್ ವಶಪಡಿಸಿಕೊಂಡಿದ್ದಾರೆ.

ಜಯ ದಾಖಲಿಸಲು 270 ಎಲೆಕ್ಟೋರಲ್ ಮತಗಳು ಅಗತ್ಯವಿದೆ. ಅಮೆರಿಕಾದಲ್ಲಿ ಒಟ್ಟು 23.9 ಕೋಟಿ ಮತದಾರರು ಇದ್ದು, ಕೊರೋನಾ ವೈರಸ್ ತಾಂಡವಾಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ 10 ಕೋಟಿ ಜನರು ಮೊದಲೇ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನದ ಅಂತಿಮ ದಿನವಾದ ಮಂಗಳವಾರ ಇನ್ನೂ 6 ಕೋಟಿ ಜನರು ಮತದಾನ ಮಾಡಿದರೂ ಅದೂ 120 ವರ್ಷಗಳ ದಾಖಲೆಯಾಗಲಿದೆ. 1900ನೇ ಇಸವಿಯಿಂದ ಯಾವುದೇ ಅಧ್ಯಕ್ಷೀಯ ಚುನಾವಣೆಯಲ್ಲೂ 16 ಕೋಟಿ ಮಂದಿ ಮತದಾನ ಮಾಡಿದ ನಿದರ್ಶನವೇ ಇಲ್ಲ. 

ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನದ ದಿನಕ್ಕಿಂತಲೂ ಮೊದಲೇ ಅಧಿಕ ಮಂದಿ ಹಕ್ಕು ಚಲಾವಣೆ ಮಾಡಿರುವುದರಿಂದ ಎಣಿಕೆ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ. 

2016ರ ಚುನಾವಣೆಯಲ್ಲಿ 5 ಕೋಟಿ ಜನರು ಮತದಾನದ ದಿನಕ್ಕೂ ಮೊದಲೇ ಮತ ಹಾಕಿದ್ದರು. ಆದರೆ, ಈ ಬಾರಿ 10 ಕೋಟಿಗೆ ಏರಿಕೆಯಾಗಿರುವುದು ಗಮನಾರ್ಹ.

Leave a Reply

Your email address will not be published. Required fields are marked *

error: Content is protected !!