ಉಡುಪಿ: ಜೂನ್ 4 ರಿಂದ ರಸ್ತೆ ಬದಿಯಲ್ಲಿ ವ್ಯಾಪಾರ ನಿಷೇಧ
ಉಡುಪಿ: ನಗರದ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು ಮತ್ತು ರಸ್ತೆ ಬದಿ
ವಾಹನಗಳಲ್ಲಿ ಹಣ್ಣು/ತರಕಾರಿ ಹಾಗೂ ರಖಂ (ಹೋಲ್ಸೇಲ್) ವ್ಯಾಪಾರಿಗಳು ಜೂನ್ 4 ರಿಂದ , ತಮ್ಮ ಎಲ್ಲಾ ವ್ಯಾಪಾರ/ವಹಿವಾಟುಗಳನ್ನು , ನಗರದ ಆದಿ ಉಡುಪಿ ಬಳಿ ಇರುವ ಎ.ಪಿಎಂ.ಸಿ ಮಾರುಕಟ್ಟೆಗೆ ಸ್ಥಳಾಂತರಿಸುವುದು.
ಯಾವುದೇ ತರಕಾರಿ/ಹಣ್ಣು ಹಂಪಲು ವ್ಯಾಪಾರಸ್ಥರು ಎ.ಪಿ.ಎಂ.ಸಿ ಮಾರುಕಟ್ಟೆಯ ಆವರಣವನ್ನು ಹೊರತುಪಡಿಸಿ, ನಗರದ ಯಾವುದೇ ಪ್ರದೇಶಗಳಲ್ಲಿ /ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಆನಂದ ಸಿ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.