ಉಡುಪಿ: ಆತಂಕ ಸೃಷ್ಟಿಸಿದ ಯುಟ್ಯೂಬ್ ಬ್ಲಾಗರ್ ಖಿನ್ನತೆಯ ಯುವಕ ರಕ್ಷಣೆ

ಉಡುಪಿ.ಜು.24: ಉಡುಪಿ ಬನ್ನಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಯ್ಟಾಂಡ್‌ನಲ್ಲಿ ಖಿನ್ನತೆಗೊಳಗಾದ ಯುವಕನೊಬ್ಬ ತಾನು‌ ಯು- ಟ್ಯೂಬ್ ಬ್ಲಾಗರ್ ಎಂದು ಮೊಬೈಲ್ ನಲ್ಲಿ ಚಿತ್ರೀಕರಣ ಹಾಗೂ ರೀಲ್ ಮಾಡಿ ಆತಂಕ ಸೃಷ್ಟಿಸಿ,ಸಾರ್ವಜನಿಕರಿಂದ ದರ್ಮದೇಟು ತಿಂದ ಮೊಬೈಲ್ ಖಿನ್ನತೆಗೋಳಗಾದ ಯುವಕನನ್ನು ವಿಶುಶೆಟ್ಟಿಯವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕ ಹೊರ‌ ಜಿಲ್ಲೆಯ‌ ನಂದ (18) ತಾನು ಮನೋರೋಗಿಯಲ್ಲ ಎಂದು ಸಾಬೀತು ಮಾಡಲು ಯು – ಟ್ಯೂಬ್ ಬ್ಲಾಗರ್ ಆಗಿ ಸಾಮಾಜೀಕ ಜಾಲತಾಣದಲ್ಲಿ ದೊಡ್ಡ ವ್ಯಕ್ತಿಯಾಗಿ ಹಣ ಮಾಡಬೇಕೆಂದು ರಕ್ಷಣಾ ಸಮಯ ತಿಳಿಸಿದ್ದಾನೆ.

ಬಸ್ ನಿಲ್ದಾಣದಲ್ಲಿ ಕೂಡಲೇ ಭದ್ರತಾ ಸಿಬ್ಬಂಧಿಗಳು ಹಾಗೂ ಪೋಲಿಸರು ಹೆಚ್ಚಿನ ಆತಂಕ ಆಗದ ಹಾಗೆ ಸಹಕರಿಸಿ ವಿಶುಶೆಟ್ಟಿಯವರ ರಕ್ಷಣಾ ಕಾರ್ಯಕ್ಕೆ ನೆರವಾದರು. ಯುವಕನ ಸಂಬಂಧಿಕರು ಸಂಪರ್ಕಕ್ಕೆ ಸಿಕ್ಕಿರುತ್ತಾರೆ.

ಇಂತಹ ಘಟನೆಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಶಿಕ್ಷಣ ಸಂಸ್ಥೆ,ಹೆತ್ತವರಿಂದ ಹಾಗೂ ಸಮಾಜದಿಂದ ಆಗಬೇಕು.ಮೊಬೈಲ್ ಗೀಳಿನಿಂದ ಪ್ರತಿ ದಿನ ಯುವಕ‌ ಯುವತಿಯರು ಮನೋರೋಗಿಗಳಾಗಿ ದುರಂತ ಆಗುತ್ತಿದೆ. ಈ ಬಗ್ಗೆ ವೈದ್ಯರೇ ಕಳವಳ ವ್ಯಕ್ತಪಡಿಸುತ್ತಿದ್ದು, ಜಾಗೃತಿ ಅಗತ್ಯ ಎಂಬ ಸಂದೇಶ ನೀಡಿದ್ದಾರೆ.
ವಿಶುಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು ಉಡುಪಿ

Leave a Reply

Your email address will not be published. Required fields are marked *

error: Content is protected !!