ಜು.26-28: ಬೆಂಗಳೂರು-ಕಾರವಾರ ಮಧ್ಯೆ ವಿಶೇಷ ರೈಲು

ಉಡುಪಿ: ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಹಾಗೂ ಕಾರವಾರ ನಡುವೆ ಜು.26 ಮತ್ತು 28ರಂದು ವಿಶೇ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ರೈಲು ನಂ. 06567 ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ಜು.26ರ ಶುಕ್ರವಾರ ಹಾಗೂ ಜು.28ರ ರವಿವಾರ ಬೆಳಗಿನ ಜಾವ 12.30ಕ್ಕೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಪ್ರಯಾಣ ಬೆಳೆಸಲಿದ್ದು, ಅದೇ ದಿನ ಸಂಜೆ 4ಗಂಟೆಗೆ ಕಾರವಾರ ತಲುಪಲಿದೆ.

ಮರು ಪ್ರಯಾಣದಲ್ಲಿ ರೈಲು ನಂ.06568 ಕಾರವಾರದಿಂದ ಶುಕ್ರವಾರ ಹಾಗೂ ರವಿವಾರ ರಾತ್ರಿ 11.30ಕ್ಕೆ ಪ್ರಯಾಣ ಬೆಳೆಸಿ ಮರುದಿನ ಅಪರಾಹ್ನ 3.30ಕ್ಕೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಎರಡು 2ಟಯರ್ ಎಸಿ, ಎರಡು ೩ಟಯರ್ ಎಸಿ, 6 ಸ್ಲೀಪರ್ ಕೋಚ್, 6 ಜನರಲ್ ಕೋಚ್ ಸೇರಿದಂತೆ ಒಟ್ಟು 18 ಕೋಚ್‌ ಗಳನ್ನು ಹೊಂದಿರುವ ಈ ರೈಲಿಗೆ ಬಾಣಸವಾಡಿ, ಚಿಕ್‌ಬಾಣಾವರ, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್ ಹಾಗೂ ಅಂಕೋಲಗಳಲ್ಲಿ ನಿಲುಗಡೆಯನ್ನು ಹೊಂದಿ ರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!