ಆಥಿ೯ಕತೆಯ ಬೆನ್ನೆಲುಬು ಕೃಷಿಗೆ ಹೆಚ್ಚು ಒತ್ತುಕೊಡದ ಬಜೆಟ್- ಪ್ರೊ.ಕೊಕ್ಕಣೆ೯

ಕೇಂದ್ರೀಯ ಬಜೆಟ್ ಎಲ್ಲಾ ರಂಗಗಳಿಗೂ ಸ್ಪಶಿ೯ಸಿದೆ ಆದರೆ ಬಹುದೊಡ್ಡ ಕೊರತೆ ಅಂದರೆ ದೇಶದ ಮೂಲ ಆಥಿ೯ಕ ಬೆನ್ನೆಲುಬು ಅನ್ನಿಸಿಕೊಂಡ ಕೃಷಿಯ ಬಗ್ಗೆ ಹೆಚ್ಚು ಒತ್ತುಕೊಡದೇ ಇರುವುದು ಎದ್ದು ಕಾಣುತ್ತದೆ.

ಬಜೆಟ್ ನ ಯಶಸ್ವು ನಿಂತಿರುವುದು ಅದನ್ನು ಕಾರ್ಯಗತಮಾಡುವುದರ ಮೇಲೆ ಅನ್ನುವುದು ಅಷ್ಟೇ ಸತ್ಯ. ಹಿಂದೆ ಸ್ಮಾರ್ಟ್ ಸಿಟಿ ಪ್ಲ್ಯಾನ್ ಬಂತು ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಅನ್ನುವುದು ಇಂದಿಗೂ ನಮ್ಮನ್ನು ಕಾಡುತ್ತಿರುವ ಮೊದಲ ಪ್ರಶ್ನೆ.

ಈ ಬಜೆಟ್ನಲ್ಲಿ ಸಮಿಶ್ರ ಸರಕಾರದ ಛಾಯೇ ಎದ್ದು ಕಾಣುವಂತಿದೆ. ನಮ್ಮಲ್ಲಿ 28 ರಾಜ್ಯಗಳಿವೆ 8 ಕೇಂದ್ರಾಡಳಿತ ಪ್ರದೇಶಗಳು ಇವೆ.

ಆದರೆ ಬಜೆಟ್ ಉದ್ದಕ್ಕೂ ಧ್ವನಿಸಿದ ಮಾತು ಬಿಹಾರ ಮತ್ತು ಆಂದ್ರಪ್ರದೇಶ. ಇವುಗಳಿಗೆ ಈ ಬಜೆಟ್ ಹೆಚ್ಚಿನ ಅನುದಾನ ನೀಡಿದೆ.ತೆರಿಗೆ ಸರಳೀಕೃತಗೊಳಿಸಿರುವುದು ಉತ್ತಮ ನಿಣ೯ಯ. ಉದ್ಯೋಗ ಸೃಷ್ಟಿ ಮಾಡಲು ಅನುಕೂಲಕರ ಬಜೆಟ್ ಎಂದು ವ್ಯಾಖ್ಯಾನಿಸಲಾಗಿದೆ. ಈ ಬಾರಿಯಾದರೂ ಕನಸು ನನಸಾಗ ಬಹುದಾ ಕಾದು ನೇೂಡ ಬೇಕು.

ಒಂದಂತು ಸತ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಹೊಂದಾಣಿಕೆ ಸೃಷ್ಟಿಯಾದಾಗ ಮಾತ್ರ ಈ ಬಜೆಟ್ ನ ಪ್ರತಿಫಲ ಜನರಿಗೆ ಸಮಪ೯ಕವಾಗಿ ತಲುಪಲು ಸಾಧ್ಯ. ಪ್ರೊ.ಕೊಕ್ಕಣೆ೯ಸುರೇಂದ್ರನಾಥ ಶೆಟ್ಟಿ ಉಡುಪಿ. ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥ ಎಂಜಿಎಂ.ಕಾಲೇಜು ಉಡುಪಿ.

Leave a Reply

Your email address will not be published. Required fields are marked *

error: Content is protected !!