ಮಲ್ಪೆ: 153 ಬಡವರಿಗೆ ಬೋರ್‌ವೆಲ್ ಮತ್ತು ಪಂಪುಸೆಟ್ ವಿತರಣೆ
ಮಲ್ಪೆ : ಸಮಾಜಸೇವಕ ಕೊಡುಗೈಧಾನಿ ನಕ್ವ ರಹಮತುಲ್ಲಾಹ ಅವರು ಬೆಂಗ್ರೆ, ಕೆಮ್ಮಣ್ಣು,ಕುದ್ರು,ಪಡೆಕರೆ,ಬೈಲಕೆರೆ,ಮಲ್ಪೆ,ನೆರ್ಗಿ ಹಾಗೂ ಬಲರಾಮನಗರದ ಸುಮಾರು 153 ಮಂದಿ ಬಡವರಿಗೆ ಅವರ ಮನೆ ಮುಂದೆ ಬೋರ್‌ವೆಲ್ ನಿರ್ಮಿಸಿ ಅದರ ಪಂಪುಸೆಟ್ಟ್ ವಿತರಣೆಯನ್ನು ಗುರುವಾರ ಅವರ ನಿವಾಸದಲ್ಲಿ ಆಯೋಜಿಸಿದ್ದರು.
ಮುಖ್ಯ ಅತಿಥಿಗಳಾದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ ಕರಾವಳಿ ಪ್ರದೇಶದಲ್ಲಿ ಆರ್ಥಿಕವಾಗಿ,ಸಾಮಾಜಿಕವಾಗಿ ಸಬಲರಲ್ಲದ ಬಡವರನ್ನು ಗುರುತಿಸಿ ನೀರಿನಂತಹ ಅಮೃತ ಜಲಧಾರೆಯನ್ನೇ ಒದಗಿಸಿದ ರಹಮತುಲ್ಲಾಹ ಕುರಾನಿನ ಸೊಗಡನ್ನು ಮೆತ್ತಿಕೊಂಡು ಸನ್ಮಾರ್ಗದಲ್ಲಿ ನಡೆಯುವ ಇಂತವರೇ ಬಡವರ ಪಾಲಿಗೆ ದೇವರು ಎಂದರು.
ಮಲ್ಪೆ ಆರಕ್ಷಕ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಮಾತನಾಡಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಮಾಡುವವರ ಬಗ್ಗೆ ಅನಗತ್ಯ ಅಪಾದನೆ ಮಾಡುವುದನ್ನು ಬಿಟ್ಟು ಇಂತವರಿಗೆ ಚೈತನ್ಯ ತುಂಬುವ ಜೊತೆಗೆ ಶೋಷಿತರ ಕಣ್ಮಣಿಯಾದ ರೆಹಮತುಲ್ಲಾರಿಗೆ ರ್ಸ್ಪೂತಿಯಾಗಿ ಎಂದರು.
ವೇದಿಕೆಯಲ್ಲಿ ಉದ್ಯಮಿ ಆನಂದ ಸಾಲ್ಯಾನ್, ಜನಾಬ್ ಇಸ್ಮಲ್ ಹಾಗೂ ಜನಾಬ್ ಅಕಬ್ಬರ್ ಜೈಲಾಹುದಿ ಉಪಸ್ಥಿತರಿದ್ದರು. ಸಮಾಜಸೇವಕ ನಕ್ವ ರೆಹಮುತುಲ್ಲಾ ಸ್ವಾಗತಿಸಿ, ಕೃಷ್ಣ ಶ್ರಿಯಾನ್ ವಂದಿಸಿದರು.
God bless you and your family for the humane service done for the poor people.