ಕಾರ್ಕಳ/ಕೋಟ: ಇಸ್ಪೀಟು ಜುಗಾರಿ- 15 ಮಂದಿಯ ಬಂಧನ

ಕಾರ್ಕಳ, ಜು.21: ನಿಟ್ಟೆ ಗಾಜ್ರಿಯಾ ಆಸ್ಪತ್ರೆಯ ಬಳಿಯ ಹಾಡಿಯಲ್ಲಿ ಜು.20ರಂದು ಮಧ್ಯಾಹ್ನ ವೇಳೆ ಉಲಾಯಿ ಪಿದಾಯಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಸೋಮನಾಥ್ ಪಾಠಕ್ (77), ಜಯಂತ್(60), ಸತೀಶ್(49), ಉದಯ ಭಿಡೆ(63), ಪ್ರಕಾಶ್(50), ಅನಂತ(65), ಸೀತಾರಾಮ(63), ವೆಂಕಟರಮಣ (69), ದಿನೇಶ್(68) ಎಂಬವರನ್ನು ಕಾರ್ಕಳ ನಗರ ಪೊಲೀಸರು 11,085ರೂ. ನಗದಿನೊಂದಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋಟ: ಯಡಾಡಿ-ಮತ್ಯಾಡಿ ಗ್ರಾಮದ ಮತ್ಯಾಡಿಯ ಮನೆಯೊಳಗೆ ಜು.20ರಂದು ಮಧ್ಯಾಹ್ನ ವೇಳೆ ಇಸ್ಟೀಟು ಜುಗಾರಿ ಆಡುತ್ತಿದ್ದ ಸುರೇಶ್(40), ಕೃಷ್ಣ(27), ಸಂತೋಷ್(36), ವಿಶ್ವನಾಥ(31), ಚಂದ್ರ(42), ರವಿ(38) ಎಂಬವರನ್ನು ಕೋಟ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ವೇಳೆ ಹುಣ್ಸೆಮಕ್ಕಿಯ ಸುಧಾಕರ, ಸತೀಶ, ಕೋಟಿ, ಆನಂದಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 1,090ರೂ. ಹಣ ಹಾಗೂ 6 ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,61,090ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!