ಶಿಕ್ಷಣ/ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ: ಡಾ.ನಾಗರತ್ನ ಕೆ.ಎ. ಔಟ್ ಸ್ಟ್ಯಾಂಡಿಂಗ್ ವಿಮೆನ್ ಅವಾರ್ಡ್

Oplus_131072

ಮಂಗಳೂರು: ವಿಸ್ಡಮ್ ಇನ್ಸ್ಟಿಟ್ಯೂಷನ್ ವತಿಯಿಂದ ನಗರದ ಹೋಟೆಲ್ ಒಶಿಯನ್ ಪರ್ಲ್ ನಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ 60 ಪುರಸ್ಕೃತರ ಪೈಕಿ ಔಟ್ ಸ್ಟ್ಯಾಂಡಿಂಗ್ ವಿಮೆನ್ ವಿಭಾಗದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ, ವಿವಿ ಕಾಲೇಜಿನ ಪ್ರಾಣಿ ಶಾಸ್ತ್ರ ಉಪನ್ಯಾಸಕಿ ಡಾ. ನಾಗರತ್ನ ಕೆ.ಎ. ಅವರಿಗೆ ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಔಟ್ ಸ್ಟ್ಯಾಂಡಿಂಗ್ ವಿಮೆನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್, ಔಟ್ ಸ್ಟ್ಯಾಂಡಿಂಗ್ ಅಡ್ಮಿನಿಸ್ಟೇಟರ್ ಅವಾರ್ಡ್, ಔಟ್ ಸ್ಟ್ಯಾಂಡಿಂಗ್ ವಿಮೆನ್, ಸೋಶಿಯಲ್ ಇಂಪಾಕ್ಟ್ ಪರ್ಸನಾಲಿಟಿ, ಡೈನಾಮಿಕ್ ಅವಾರ್ಡ್ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಈ ಸಂದರ್ಭದಲ್ಲಿ ಮಣಿಪಾಲ ಎಂಐಟಿ ಸಂಸ್ಥೆಯ ಅಸೋಸಿಯೇಟ್ ಪ್ರೊ. ಡಾ.ದಶರಥರಾಜ್ ಕೆ. ಶೆಟ್ಟಿ, ಮಾತನಾಡಿ, ಇದೊಂದು ಸಾಧಕರನ್ನು ಗುರುತಿಸುವ ಒಳೆಯ ಕಾರ್ಯಕ್ರಮವಾಗಿದೆ. ನಾವು ಒಳ್ಳೆಯ ಗುರುಗಳನ್ನು ಪಡೆದ್ದರಿಂದ ನಾವು ಕೂಡ ಒಳ್ಳೆಯ ಪೋಸಿಶನ್ ತಲುಪಿದ್ದೇವೆ. ಇಂತಹ ಕಾರ್ಯಗಳು ಇನ್ನಷ್ಟು ಆಗಬೇಕಿದೆ. ಮುಂದಿನ ಪೀಳಿಗೆಗಳಿಗೆ ಗುರುಗಳ ಮಹತ್ವ ಅರಿಯಬೇಕಾಗಿದೆ ಎಂದು ಹೇಳಿದರು.

ಮಂಗಳೂರು ಐಸಿಎಐ ಬ್ರಾಂಚ್ ಚೇರ್ಮನ್ ಸಿ. ಎ. ಗೌತಮ್ ಪೈ ಡಿ., ಸುರತ್ಕಲ್ ಎನ್ ಐಟಿಕೆ ಎಫ್ ಆರ್. ಎಸ್.ಸಿ ಪ್ರೊಫೆಸರ್ ಡಾ.ಅರುಣ್ ಇಸ್ಲೊರ್, ತ್ರಿಷಾ ಶಿಕ್ಷಣ ಸಂಸ್ಥೆಯ ಫೌಂಡರ್ ಸಿ.ಎ.ಗೋಪಾಲ ಕೃಷ್ಣ ಭಟ್ ವಿಸ್ಡಮ್ ಇನ್ಸ್ಟಿಟ್ಯೂಟ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಫ್ರಾನ್ಸಿಕ ತೇಜ್, ವಿಸ್ಡಮ್ ಇನ್ಸ್ಟಿಟ್ಯೂಟ್ ಸಿಇಓ ಡಾ.ಗುರುತೇಜ್ ಅಭಿಷೇಕ್ ಕ್ಷತ್ರಿಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!