ಉಡುಪಿ: ಗಣನೀಯ ಇಳಿಮುಖದತ್ತ ಕೋವಿಡ್ ಸಕ್ರಿಯ ಪ್ರಕರಣ, ಜಿಲ್ಲೆಯಲ್ಲಿ 20 ಪಾಸಿಟಿವ್
ಉಡುಪಿ: (ಉಡು ಪಿಟೈಮ್ಸ್ ವರದಿ)ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸಕ್ರಿಯಾ ಪ್ರಕರಣ ಗಣನೀಯಾ ಇಳಿಕೆಯಾಗಿದ್ದು, ಮೂರುವರೇ ತಿಂಗಳ ಬಳಿಕ ಸಕ್ರಿಯ ಪ್ರಕರಣ ಐನೂರರ ಗಡಿಯಿಂದ ಇಳಿಮುಖವಾಗಿದೆ.
ನವೆಂಬರ್ 3 ರಂದು ಆರೋಗ್ಯ ಇಲಾಖೆ ಪ್ರಕಟಿಸಿದ ವರದಿಯಲ್ಲಿ, ಜಿಲ್ಲೆಯಲ್ಲಿ 20 ಕೋವಿಡ್ ಪಾಸಿಟಿವ್ ವರದಿಯಾಗಿದ್ದು, 463 ಮಂದಿಯಲ್ಲಿ ಸಕ್ರಿಯ ಪ್ರಕರಣ ಇದೆಂದು ತಿಳಿಸಿದೆ.
ಇವರೆಗೆ ಉಡುಪಿ ಜಿಲೆಯಲ್ಲಿ 1,88,454 ಮಂದಿಯ ಗಂಟಲ ದ್ರವವನ್ನು ಪರೀಕ್ಷಿಸಿದ್ದು, 21,985 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿತ್ತು, ಕೋವಿಡ್ ನಿಂದ ಜಿಲ್ಲೆಯಲ್ಲಿ 183 ಮಂದಿ ಮೃತ ಪಟ್ಟಿದ್ದಾರೆ.