ಮತ್ತೊಂದು ಎಸಿ ದುರಂತ- ಒಂದೇ ಕುಟುಂಬದ ನಾಲ್ವರು ಬಲಿ!
ಕುವೈತ್: ಫ್ಲ್ಯಾಟ್ ವೊಂದರಲ್ಲಿ ಶುಕ್ರವಾರ ರಾತ್ರಿ ನಡೆದ ಬೆಂಕಿ ಆಕಸ್ಮಿಕದಿಂದಾಗಿ ಭಾರತೀಯ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿಯಿಂದಾಗಿ ಉಸಿರುಗಟ್ಟಿ ಆಲಪ್ಪುಳದ ನೀರಟ್ಟುಪುರಂ ಮೂಲದ ಮ್ಯಾಥ್ಯೂಸ್ ಮುಳಕಲ್, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ರಜೆಗೆಂದು ಭಾರತಕ್ಕೆ ಬಂದಿದ್ದ ಇವರು ಶುಕ್ರವಾರ ಕುವೈತ್ ಗೆ ಮರಳಿದ್ದರು. ಅದೇ ದಿನ ಈ ದುರ್ಘಟನೆ ನಡೆದಿದೆ. ಅಬ್ಬಾಸಿಯಾ ಪ್ರದೇಶದ ಕಟ್ಟಡದ ಎರಡನೇ ಮಹಡಿಯಲ್ಲಿ ಈ ದಂಪತಿ ವಾಸವಿದ್ದರು.
“ಕುಟುಂಬವು ಕೇರಳದಲ್ಲಿ ರಜೆಗೆಂದು ಹೋದವರು ಕುವೈತ್ ಗೆ ಮರಳಿದ್ದರು, ಶುಕ್ರವಾರ ಸ್ಥಳೀಯ ಸಮಯ ಸುಮಾರು 4 ಗಂಟೆಗೆ ಆಗಮಿಸಿದ್ದರು.
ಮ್ಯಾಥ್ಯೂಸ್ ಮುಲಾಕಲ್ ರಾಯಿಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು, ಅವರ ಪತ್ನಿ ಲಿನಿ ಅಲ್ ಅಹ್ಮದಿ ಗವರ್ನರೇಟ್‌ನ ಅದನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದರು. ಅವರ ಮಕ್ಕಳು ಭವಾನ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ” ಎಂದು ದಿ ಅರಬ್ ಟೈಮ್ಸ್ ಪತ್ರಿಕೆ ಹೇಳಿದೆ.