ಕಾಪು: ಬೈಕ್‌ಗೆ ಕಾರು ಡಿಕ್ಕಿ- ಸವಾರ ಮೃತ್ಯು, ಕಾರು ಚಾಲಕ ಗಂಭೀರ

Oplus_131072

ಕಾಪು: ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಮೃತ ಬೈಕ್ ಸವಾರ ತಮಿಳುನಾಡು ಮೂಲದ ಯುವಕ ಎಂದು ತಿಳಿದುಬಂದಿದೆ.

ಮೃತನ ಮಾಹಿತಿಯನ್ನು ಕಾಪು ಪೊಲೀಸರು ಪತ್ತೆಹಚ್ವುತ್ತಿದ್ದಾರೆ.

ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದೆ. ಚಾಲಕನಿಗೂ ಗಂಭೀರ ಗಾಯಗೊಂಡಿದ್ದು, ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು,‌ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!