ಉಡುಪಿ: ವಿದ್ಯುತ್ ಅಪಘಾತ- ಎಲೆಕ್ಟ್ರಿಷಿಯನ್ ಮೃತ್ಯು
ಉಡುಪಿ, ಜು.19: ವಿದ್ಯುತ್ ಆಘಾತದಿಂದ ಗಂಭೀರವಾಗಿ ಗಾಯ ಗೊಂಡಿದ್ದ ಎಲೆಕ್ಟ್ರಿಷಿಯನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮೂಡನಿಡಂಬೂರು ಗ್ರಾಮದ ಗಣೇಶ್ ಭಂಡಾರಿ(58) ಎಂದು ಗುರುತಿಸಲಾಗಿದೆ. ಇವರು ಜು.10ರಂದು ಮನೆ ಹತ್ತಿರದ ಮನೆಯ ಹಿಂಭಾಗ ಎಲೆಕ್ಟ್ರಿಷಿಯನ್ ಕೆಲಸವನ್ನು ಮಾಡುತ್ತಿದ್ದು, ಆಗ ಆಕಸ್ಮಿಕವಾಗಿ ವಿದ್ಯುತ್ ಪ್ರವಾಹಿಸಿ ಕೆಳಗೆ ಬಿದ್ದರು.
ಈ ವೇಳೆ ಅವರ ಕುತ್ತಿಗೆಯು ಸಿಮೆಂಟ್ ಕಟ್ಟೆಗೆ ತಾಗಿ ಗಂಭೀರವಾಗಿ ಗಾಯಗೊಂಡ ಇವರು, ಜು.18ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.