ಕಲ್ಯಾಣಪುರ: ನಿರ್ಮಾಣ ಹಂತದಲ್ಲಿ ‘ಮಾಂಡವಿ ಕಾಸಾ ಗ್ರ್ಯಾಂಡ್’ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣ

ಉಡುಪಿ: (ಉಡುಪಿ ಟೈಮ್ಸ್ ವರದಿ) ರಾಜ್ಯದಲ್ಲಿಯೇ ವಸತಿ ಸಮುಚ್ಚಯ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಉಡುಪಿಯ ಮಾಂಡವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಮ್ಮ ವಿಶೇಷ ಮತ್ತು ವಿಶಿಷ್ಟ ಶೈಲಿಯಲ್ಲಿ ವಸತಿ ನಿವೇಶನ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡು ಬಂದಿರುವ ಮಾಂಡವಿ ಬಿಲ್ಡರ್ಸ್ ಗ್ರಾಹಕರಿಗೆ ತೃಪ್ತಿ ನೀಡಿದೆ. ಎರಡು ದಶಕಗಳಿಂದ ಸಮೃದ್ಧ ವಸತಿ ಸಮುಚ್ಚಯಗಳನ್ನು ನಿರ್ಮಿಸಿಕೊಂಡು ಬಂದಿರುವ ಮಾಂಡವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್, ಮುಂದೆ ಪ್ರತಿಷ್ಟಿತ ಯೋಜನೆಯನ್ನು ಹಮ್ಮಿಕೊಂಡಿದೆ.

ನಗರದ ಹೃದಯ ಭಾಗದಲ್ಲಿರುವ ಕಲ್ಯಾಣಪುರ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ಮಾಂಡವಿ ಬಿಲ್ಡರ್ಸ್ ನ ಮುಂದಿನ ಪ್ರತಿಷ್ಠಿತ ಮೆಗಾ ಯೋಜನೆ ‘ಮಾಂಡವಿ ಕಾಸಾ ಗ್ರ್ಯಾಂಡ್’ ಹೆಸರಿನೊಂದಿಗೆ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ಸಿದ್ಧಗೊಂಡಿದೆ.

ಪ್ರವರ್ತಕರಾದ ಜೆರಿ ವಿನ್ಸೆಂಟ್ ಡಾಯಸ್ ರವರ ವಿಶೇಷ ಮುತುವರ್ಜಿಯಿಂದ ಗ್ಲೆನ್ ಡಾಯಸ್ ಮತ್ತು ಜೇಸನ್ ಡಾಯಸ್ ರವರು, ಗ್ರಾಹಕರಿಗೆ ತೃಪ್ತಿ ಮತ್ತು ಅತ್ಯುನ್ನತ ಗುಣಮಟ್ಟದ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ಸಿದ್ಧಗೊಳಿಸಿದ್ದಾರೆ. ಮಾಂಡವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಪ್ರತಿಷ್ಟಿತ ಮೇಘಾ ಯೋಜನೆಯಾಗಿರುವ ‘ಮಾಂಡವಿ ಕಾಸಾ ಗ್ರ್ಯಾಂಡ್’ ಗ್ರಾಹಕರಿಗೆ ಪ್ರತಿ ಹಂತದಲ್ಲೂ ಐಷಾರಾಮಿ ಅನುಭವವನ್ನು ನೀಡಲಿದೆ.

ಉಡುಪಿಯ ಕಲ್ಯಾಣಪುರದಲ್ಲಿ ನಿರ್ಮಾಣವಾಗಲಿರುವ ‘ಮಾಂಡವಿ ಕಾಸಾ ಗ್ರ್ಯಾಂಡ್’ ನಲ್ಲಿ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣ ಗಳು ಹೊಂದಿದೆ. ಗ್ರೌಂಡ್ ಫ್ಲೋರ್ ಸೇರಿದಂತೆ ಸುಮಾರು 3 ಸ್ತರಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ವಿಶಾಲವಾದ ಸ್ಥಳಾವಕಾಶವಿದೆ. 2ನೇ ಮಹಡಿಯಿಂದ 13ನೇ ಮಹಡಿಯವರೆಗೆ ಸುಮಾರು 109 ವಸತಿ ಸಮುಚ್ಚಯಗಳು ಇರಲಿದ್ದು, 2 ಬಿಎಚ್ ಕೆ ಮತ್ತು 3 ಬಿಎಚ್ ಕೆ ಫ್ಲ್ಯಾಟ್ ಗಳು ಲಭ್ಯವಿದೆ. ಇಲ್ಲಿ 13 ಜನರಿಗೆ ಸ್ಥಳಾವಕಾಶವಿರುವ ಅತ್ಯುನ್ನತ ದರ್ಜೆಯ ಲಿಫ್ಟ್ ಸೌಲಭ್ಯದ ವ್ಯವಸ್ಥೆ ಇದೆ. ಗ್ರ್ಯಾಂಡ್ ಎಂಟ್ರೆನ್ಸ್ ಲಾಬಿ, ಈಜುಕೊಳ ಮತ್ತು ಬೇಬಿ ಪೂಲ್, ಕ್ಲಬ್ ಹೌಸ್, ಫಿಟ್ನೆಸ್ ಸೆಂಟರ್, 24 ಗಂಟೆಗಳ ಪವರ್ ಬ್ಯಾಕಪ್, ಭದ್ರತೆ, ಕವರ್ ಪಾರ್ಕಿಂಗ್ ಪ್ರದೇಶ, ಸಂದರ್ಶಕರ ಪಾರ್ಕಿಂಗ್, ಮಕ್ಕಳ ಆಟದ ಪ್ರದೇಶ ಹಾಗೂ ಇತರ ಹಲವು ವಿಶೇಷ ಸೌಲಭ್ಯಗಳು ‘ಮಾಂಡವಿ ಖಾಸಾ ಗ್ರ್ಯಾಂಡ್’ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣದಲ್ಲಿ ಹೊಂದಿದೆ.

ಪ್ರತಿ ಫ್ಲ್ಯಾಟ್ ಗಳು ವಿಶಾಲವಾಗಿದ್ದು, ಉಡುಪಿ ನಗರದ ಕಲ್ಯಾಣಪುರ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿಯೇ ಈ ವಸತಿ  ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣ  ನಿರ್ಮಾಣವಾಗುತ್ತಿರುವುದರಿಂದ, ಗ್ರಾಹಕರು ಇದರ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು. ಐಷಾರಾಮಿ ಮತ್ತು ಅನೂಕೂಲತೆ ಎರಡನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ವಸತಿ ಸಮುಚ್ಚಯಗಳನ್ನು ವಿಶೇಷ ವೈಶಿಷ್ಟಗಳು ಮತ್ತು ಸೌಲಭ್ಯಗಳಿಂದ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಂಡವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಪ್ರಕಟನೆ ತಿಳಿಸಿದೆ.

Mandavi Real Estate Developers

Adress: 3rd Floor, Mandavi Trade Centre
Udupi-Manipal, M.G Road
Kadiyali, Kunjibettu
Udupi – 576 102

Office Landline: 0820 2529905, 0820-4292356

For more information on the project:
Email us at : [email protected]
[email protected]
[email protected]

Call us at

Dr. Jerry Vincent Dias: 98452 48959
Glen Dias: 98800 58954
Jason Dias: 99729 94840

www.mandavibuilders.com

Leave a Reply

Your email address will not be published. Required fields are marked *

error: Content is protected !!