ಕಾಪು ಲೈಟ್ ಹೌಸ್ ಬೀಚ್ ಅಭಿವೃದ್ಧಿಯ ಹಣ ಮಂಜೂರಾತಿಗೆ ಸದನದಲ್ಲಿ ಒತ್ತಾಯಿಸಿದ ಶಾಸಕ ಗುರ್ಮೆ ಸುರೇಶ್
ಬೆಂಗಳೂರು: ಕಾಪು ವಿಧಾನಸಭಾ ಕ್ಷೇತ್ರದ ಕಾಪು ಲೈಟ್ ಹೌಸ್ ಬೀಚ್ ಅಭಿವೃದ್ಧಿಪಡಿಸಲು 2022-23 ರಲ್ಲಿ ಹಿಂದಿನ ಸರ್ಕಾರದಿಂದ ರೂ.5 ಕೋಟಿ ಅನುದಾನ ಮಂಜೂರಾಗಿದ್ದು ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ ಕಾಮಗಾರಿಯ ಅನುಷ್ಠಾನ ಗೊಳಿಸುಂತೆ ಹಾಗೂ ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ನ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಂಗಳವಾರ ಸದನದ ಗಮನ ಸೆಳೆದರು.
ಪ್ರವಾಸೋದ್ಯಮ ಸಚಿವರು ಇದಕ್ಕೆ ಸ್ಪಂದಿಸಿ ಆದ್ಯತೆಯ ಮೇರೆಗೆ ಕಾಪು ಲೈಟ್ ಹೌಸ್ ಬೀಚ್ ಹಾಗೂ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಅನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.